ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆ ಕ್ಷಣದ ತೊಂದರೆ: ಉಡಾವಣೆ ಸ್ಥಗಿತಗೊಳಿಸಿದ ಸ್ಪೇಸ್‌ಎಕ್ಸ್ ರಾಕೆಟ್

Last Updated 27 ಫೆಬ್ರುವರಿ 2023, 13:29 IST
ಅಕ್ಷರ ಗಾತ್ರ

ಕೇಪ್ ಕೆನವೆರಲ್, ಅಮೆರಿಕ: ನಾಸಾದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸಂಯುಕ್ತ ಅರಬ್‌ ಸಂಸ್ಥಾನದ ಮೊದಲ ಮಹಿಳಾ ಗಗನಯಾತ್ರಿ ಸೇರಿ ನಾಲ್ವರು ಗಗನಯಾನಿಗಳನ್ನು ಕೊಂಡೊಯ್ಯಬೇಕಿದ್ದ ಸ್ಪೇಸ್ಎಕ್ಸ್‌ನ ಫಾಲ್ಕನ್ 9 ರಾಕೆಟ್‌, ಕೊನೆ ನಿಮಿಷದಲ್ಲಿ ಎದುರಾದ ತಾಂತ್ರಿಕ ತೊಂದರೆಯಿಂದ ಸೋಮವಾರ ಉಡಾವಣೆಯನ್ನು ಸ್ಥಗಿತಗೊಳಿಸಿತು.

ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೆ ಕ್ಷಣಗಣನೆ ಶುರುವಾಗಿ, ಕೊನೆಯ ಎರಡು ನಿಮಿಷಗಳು ಬಾಕಿ ಇರುವಾಗ ಎಂಜಿನ್‌ ಇಗ್ನಿಷನ್‌ ವ್ಯವಸ್ಥೆಯಲ್ಲಿ ತೊಂದರೆ ಕಾಣಿಸಿತು. ಅದನ್ನು ಸರಿಪಡಿಸಲು ಸಮಯ ಮತ್ತು ಬೇರೆ ಮಾರ್ಗ ಇಲ್ಲದೇ ಉಡಾವಣೆ ಸ್ಥಗಿತಗೊಳಿಸಲಾಯಿತು.

ಫಾಲ್ಕನ್ ರಾಕೆಟ್‌ನಲ್ಲಿನ ಕ್ಯಾಪ್ಸುಲ್‌ನಲ್ಲಿ ನಾಸಾದ ಇಬ್ಬರು, ರಷ್ಯಾ ಮತ್ತು ಸಂಯುಕ್ತ ಅರಬ್‌ ಸಂಸ್ಥಾನದ (ಯುಎಇ) ತಲಾ ಒಬ್ಬರು ಸೇರಿ ನಾಲ್ವರು ಗಗನಯಾತ್ರಿಗಳು ಇದ್ದರು. ಇವರು ರಾಕೆಟ್‌ನ ಕ್ಯಾಪ್ಸೂಲ್‌ನಿಂದ ಹೊರ ಬಂದಿದ್ದಾರೆ.

ಮತ್ತೆ ಯಾವಾಗ ಉಡಾವಣೆ ನಡೆಯಲಿದೆ ಎಂದು ಸ್ಪೇಸ್ ಎಕ್ಸ್ ತಕ್ಷಣಕ್ಕೆ ಮಾಹಿತಿ ನೀಡಲಿಲ್ಲ. ಪ್ರತಿಕೂಲ ಹವಾಮಾನದ ಮುನ್ಸೂಚನೆ ಇದ್ದರೂ ಮುಂದಿನ ಉಡಾವಣೆ ಮಂಗಳವಾರಕ್ಕೂ ಮೊದಲೇ ನಡೆಯುವ ನಿರೀಕ್ಷೆ ಇದೆ.

ಅಕ್ಟೋಬರ್‌ನಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿರುವ ಸ್ಪೇಸ್ ಎಕ್ಸ್‌ನ ಮತ್ತೊಂದು ಸಿಬ್ಬಂದಿ ತಂಡದ ಬದಲಿಗೆ, ಯುಎಇಯ ಮೊದಲ ಗಗನಯಾತ್ರಿ ಸುಲ್ತಾನ್ ಅಲ್-ನೆಯಾದಿ, ರಾಕೆಟ್‌ನ ಕಮಾಂಡರ್ ಸ್ಟೀಫನ್ ಬೋವೆನ್ ಹಾಗೂ ಇತರ ಇಬ್ಬರು ಗಗನಯಾನಿಗಳನ್ನು ಒಂದು ತಿಂಗಳ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT