ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್‌ ತಲುಪಿದ ನೆರವು ಸಾಮಗ್ರಿ

Published 14 ಅಕ್ಟೋಬರ್ 2023, 16:02 IST
Last Updated 14 ಅಕ್ಟೋಬರ್ 2023, 16:02 IST
ಅಕ್ಷರ ಗಾತ್ರ

ಕೈರೊ (ರಾಯಿಟರ್ಸ್‌): ಅಮೆರಿಕ  ಮತ್ತು ಟರ್ಕಿಯಿಂದ ವೈದ್ಯಕೀಯ ಮತ್ತು ನೆರವಿನ ಅಗತ್ಯ ಸಾಮಗ್ರಿಗಳನ್ನು ಹೊತ್ತ ವಿಮಾನಗಳು ಈಜಿಪ್ಟ್‌ನ ಎಲ್– ಅರಿಷ್‌ ವಿಮಾನನಿಲ್ದಾಣ ತಲುಪಿವೆ.

ಈ ಸಾಮಗ್ರಿಗಳನ್ನು ಸುರಕ್ಷಿತವಾಗಿ ಗಾಜಾಕ್ಕೆ ಕೊಂಡೊಯ್ಯಲು ಸಾಧ್ಯವಾಗುವವರೆಗೆ ಇಲ್ಲಿಯೇ ಕಾಯಲಾಗುವುದು. ವೈದ್ಯಕೀಯ ಮತ್ತು ಅಗತ್ಯ ಸಾಮಗ್ರಿ ಹೊತ್ತ ಒಟ್ಟು ಐದು ವಿಮಾನಗಳು ಈವರೆಗೆ ಈಜಿಪ್ಟಿಗೆ ಬಂದಿವೆ ಎಂದು ರೆಡ್‌ ಕ್ರೆಸೆಂಟ್‌ನ ಅಧಿಕಾರಿ ತಿಳಿಸಿದರು.

ಇಲ್ಲಿಂದ ಗಾಜಾಕ್ಕೆ ಮಾರ್ಗ ಕಲ್ಪಿಸುವ ರಫಾ ಕ್ರಾಸಿಂಗ್‌ ಸಂಚಾರಕ್ಕೆ ಮುಕ್ತಗೊಳ್ಳುವುದನ್ನು ನಿರೀಕ್ಷಿಸಲಾಗುತ್ತಿದೆ ಎಂದು ಡಬ್ಲ್ಯುಎಚ್‌ ಒ  ಕೂಡ ಹೇಳಿದೆ. ಪ್ಯಾಲೆಸ್ಟೀನಿಯನ್ನರ ನೆಲೆ ಮೇಲೆ ಇಸ್ರೇಲ್‌ ದಾಳಿ ಆರಂಭವಾದ ಬಳಿಕ ರಫಾ ಕ್ರಾಸಿಂಗ್‌ ಅನ್ನು ಬಂದ್‌ ಮಾಡಲಾಗಿದೆ.

ಗಾಜಾದಿಂದ ಜನರು ದಕ್ಷಿಣ ಭಾಗಕ್ಕೆ ತೆರಳಬೇಕೆನ್ನುವ ತನ್ನ ಆದೇಶವನ್ನು ಇಸ್ರೇಲ್‌ ಮರುಪರಿಶೀಲಿಸಬೇಕು. ಇಲ್ಲದಿದ್ದಲ್ಲಿ ಇದು ಬಹುದೊಡ್ಡ ಮಾನವ ದುರಂತ ಆಗಲಿದೆ ಎಂದು ಡಬ್ಲ್ಯುಎಚ್‌ಒದ ಮಹಾ ನಿರ್ದೇಶಕ ಟೆಡ್ರೊಸ್‌ ಅಧಾನೋಮ್ ಘೆಬ್ರೆಯೆಸಿಸ್‌ ಹೇಳಿದರು.

ರಫಾ ಕ್ರಾಸಿಂಗ್‌ ಮೂಲಕ ಗಾಜಾಕ್ಕೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಶನಿವಾರ ಈಜಿಪ್ಟ್‌, ಇಸ್ರೇಲ್ ಮತ್ತು ಕತಾರ್‌ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ಅಧಿಕಾರಿ ತಿಳಿಸದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT