ಜೆರುಸಲೇಮ್: ಜನವರಿಯಿಂದ ಭಾರತಕ್ಕೆ ಎಲ್ಎಂಜಿ (ಲೈಟ್ ಮಶಿನ್ ಗನ್) ಪೂರೈಕೆ ಆರಂಭಿಸಲಾಗುವುದು ಎಂದು ಇಸ್ರೇಲ್ನ ಪ್ರಮುಖ ರಕ್ಷಣಾ ಸಾಮಗ್ರಿ ತಯಾರಕ ಸಂಸ್ಥೆಯೊಂದು ಹೇಳಿದೆ.

1.70 ಲಕ್ಷ ಹೊಸ ತಲೆಮಾರಿನ ರೈಫಲ್ಗಳ (ಎಲ್ಎಂಜಿ) ಪೂರೈಕೆಗೆ ಸಂಬಂಧಿಸಿದ ಒಪ್ಪಂದವು ಅಂತಿಮ ಹಂತದಲ್ಲಿದೆ. ಇದು, ಪೂರ್ಣಗೊಂಡ ಬಳಿಕ ಮೊದಲ ಹಂತದಲ್ಲಿ 40 ಸಾವಿರ ಎಲ್ಎಂಜಿ ಪೂರೈಕೆ ಮಾಡಲಾಗುವುದು ಎಂದು ಇಸ್ರೇಲ್ ವೆಪನ್ಸ್ ಇಂಡಸ್ಟ್ರೀಜ್(ಐಡಬ್ಲುಐ) ಸಿಇಒ ಶುಕಿ ಸ್ವಾರ್ಟ್ಸ್ ಹೇಳಿದ್ದಾರೆ.

‘ಮುಂದಿನ ವರ್ಷದಿಂದ ಆರಂಭವಾಗಿ ಮುಂದಿನ ಐದು ವರ್ಷಗಳವರೆಗೆ ಈ ರೈಫಲ್ಗಳ ಪೂರೈಕೆ ಪ್ರಕ್ರಿಯೆ ನಡೆಯುವುದು. ವರ್ಷಾರಂಭಕ್ಕೆ ಮೊದಲ ಹಂತದ ಪೂರೈಕೆಗೆ ಚಾಲನೆ ನೀಡಲಾಗುವುದು’ ಎಂದು ಹೇಳಿದ್ದಾರೆ.

‘ಭಾರತಕ್ಕೆ ರಕ್ಷಣಾ ಸಾಮಗ್ರಿಗಳ ಪೂರೈಕೆಗೆ ಸಂಬಂಧಿಸಿ ಎಲ್ಎಂಜಿ ಪೂರೈಕೆ ಸೇರಿ ಮೂರು ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸಿಕ್ಯೂಬಿ(ಕ್ಲೋಸ್ ಕ್ವಾರ್ಟರ್ಸ್ ಬ್ಯಾಟಲ್) ರೈಫಲ್ ಹಾಗೂ ಅಬೆಲ್ ತಂತ್ರಜ್ಞಾನ ಆಧಾರಿತ ಶಸ್ತ್ರಾಸ್ತ್ರ ಪೂರೈಕೆ ಇತರ ಒಪ್ಪಂದಗಳಾಗಿದ್ದು, ಇವುಗಳ ಕುರಿತು ಇನ್ನೂ ಮಾತುಕತೆ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

‘ಎಲ್ಎಂಜಿಗಳ ಪರೀಕ್ಷಾರ್ಥ ಪ್ರಯೋಗಗಳು ಪೂರ್ಣಗೊಂಡಿದ್ದು, ಸರ್ಕಾರದಿಂದಲೂ ಪರಿಶೀಲನೆಯಾಗಿದೆ. ಇವುಗಳ ತಯಾರಿಕೆಗೆ ಪರವಾನಗಿ ಲಭಿಸಿದೆ. ಸ್ಥಳೀಯವಾಗಿ ಉತ್ಪಾದನೆ ಆರಂಭಿಸುವ ಮೂಲಕ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಬೆಂಬಲಿಸಿದ ಮೊದಲ ಕಂಪನಿ ನಮ್ಮದು’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.