ಲಂಡನ್: ವಿದ್ಯುತ್ ಉಪಸ್ಥಾವರದಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಿಂದಾಗಿ ಲಂಡನ್ ಹೀಥ್ರೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಶುಕ್ರವಾರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ಆದರೆ, ಶನಿವಾರ ಬೆಳಗಿನ ಜಾವ ವಿದ್ಯುತ್ ಪುನರ್ ಸ್ಥಾಪನೆ ಕೆಲಸ ನಡೆದಿರುವುದರಿಂದ ಕೆಲ ವಿಮಾನಗಳ ಕಾರ್ಯಾಚರಣೆಗೆ ಅನುಮತಿ ಸಿಕ್ಕಿದೆ. ಬ್ರಿಟಿಷ್ ಏರ್ವೇಸ್ ವಿಮಾನಗಳು ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಆಗುತ್ತಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ಹೀಥ್ರೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಯುರೋಪ್ನ ಅತ್ಯಂತ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುವ ವಿಮಾನ ನಿಲ್ದಾಣವಾಗಿದೆ.

ವಿಮಾನ ನಿಲ್ದಾಣದಿಂದ ಕೇವಲ 3.5 ಕಿ.ಮೀ ದೂರ ಇರುವ ವಿದ್ಯುತ್ ಉಪಸ್ಥಾವರದಲ್ಲಿ ಸಂಭವಿಸಿದ ಬೆಂಕಿ ನಂದಿಸಲು ಅಗ್ನಿಶಾಮಕ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಏಳು ದಿನ ಕಾರ್ಯಾಚರಣೆ ನಡೆಸಬೇಕಿದೆ ಎಂದು ಹೇಳಿದ್ದಾರೆ.

ಭಾರತಕ್ಕೆ ಸಂಬಂಧಿಸಿದಂತೆ ಒಂದು ವಿಮಾನ ಮುಂಬೈಗೆ ವಾಪಸಾಗಿದ್ದು, ದೆಹಲಿಯಿಂದ ಹೊರಟಿದ್ದ ಇನ್ನೊಂದು ವಿಮಾನ ವನ್ನು ಫ್ರಾಂಕ್ಫರ್ಟ್ಗೆ ಕಳುಹಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಹೀಥ್ರೂ ವಿಮಾನ ನಿಲ್ದಾಣದಿಂದ ಕಾರ್ಯಾಚರಿಸ ಬೇಕಿದ್ದ ಇತರ ಬಹುತೇಕ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಲವು ಸಂಸ್ಥೆಗಳ ವಿಮಾನಗಳ ಸಂಚಾರ ರದ್ದಾಗಿರುವುದರಿಂದ ಜಾಗತಿಕವಾಗಿ ಸುಮಾರು 2 ಲಕ್ಷ ಪ್ರಯಾಣಿಕರಿಗೆ ತೊಂದರೆ ಆಗಿದೆ ಎಂದು ವಾಯುಯಾನ ವಿಶ್ಲೇಷಣಾ ಸಂಸ್ಥೆ ಸಿರಿಯಂ ಹೇಳಿದೆ.

‘ಲಂಡನ್ ಹೀಥ್ರೂಗೆ ಹೋಗಲಿದ್ದ ಮತ್ತು ಅಲ್ಲಿಂದ ಭಾರತಕ್ಕೆ ಬರಲಿದ್ದ ಏರ್ ಇಂಡಿಯಾದ ಎಲ್ಲ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಹಾಗೆಯೇ ಲಂಡನ್ನ ಗ್ಯಾಟ್ವಿಕ್ಗೆ ಸಂಚರಿಸುವ ತನ್ನ ವಿಮಾನಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಏರ್ ಇಂಡಿಯಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.