ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫಾ ನಗರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 28 ಪ್ಯಾಲೆಸ್ಟೀನಿಯನ್ನರು ಸಾವು

Published 10 ಫೆಬ್ರುವರಿ 2024, 13:35 IST
Last Updated 10 ಫೆಬ್ರುವರಿ 2024, 13:35 IST
ಅಕ್ಷರ ಗಾತ್ರ

ರಫಾ (ಗಾಜಾ ಪಟ್ಟಿ,): ರಫಾ ನಗರದ ಮೇಲೆ ಶನಿವಾರ ನಸುಕಿನಲ್ಲಿ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ 28 ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ.

ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ದಾಳಿಗೆ ಮುನ್ನ ದಕ್ಷಿಣ ಗಾಜಾ ನಗರದಿಂದ ನಾಗರಿಕರನ್ನು ಸ್ಥಳಾಂತರಿಸುವಂತೆ ಸೇನೆಗೆ ಸೂಚಿಸಿದ್ದರು. ನಂತರ ವೈಮಾನಿಕ ದಾಳಿ ನಡೆದಿದೆ.

ನೆತನ್ಯಾಹು ಅವರು ದಾಳಿಯ ಬಗ್ಗೆ ಹೇಳಿಕೆ ನೀಡಿದ್ದರಿಂದ ದಕ್ಷಿಣ ಗಾಜಾದಲ್ಲಿ ಭೀತಿ ಆವರಿಸಿತ್ತು. ಗಾಜಾದ 23 ಲಕ್ಷ ಜನರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಈಗ ರಫಾ ನಗರದಲ್ಲಿದ್ದಾರೆ.

ಇಸ್ರೇಲ್‌ ಪದೇ ಪದೇ ಸ್ಥಳಾಂತರದ ಆದೇಶ, ಸೂಚನೆ ನೀಡುತ್ತಿದ್ದು, ಇದರಿಂದ ಬಹುತೇಕರಿಗೆ ಎಲ್ಲಿಗೆ ಹೋಗಬೇಕು ಎಂಬುದೇ ತಿಳಿಯದಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT