ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ರಕ್ಷಣೆಗೆ ಯುದ್ಧ ತರಬೇತಿಗಿಳಿದ ನವ ಜೋಡಿ

ರಷ್ಯಾ ಪಡೆಗಳ ವಿರುದ್ಧದ ಹೋರಾಟಕ್ಕೆ ಈ ಯತ್ನ
Last Updated 19 ಮಾರ್ಚ್ 2022, 15:00 IST
ಅಕ್ಷರ ಗಾತ್ರ

ಒಡೆಸ್ಸಾ(ರಾಯಿಟರ್ಸ್): ಪ್ರೀತಿ, ಪ್ರೇಮ ಎಂದು ಮೈಮರೆಯಬೇಕಿದ್ದ ಹಲವು ನವ ಜೋಡಿಗಳು ಉಕ್ರೇನ್ ಮೇಲೆ ದಂಡೆತ್ತಿ ಬಂದಿರುವ ರಷ್ಯಾ ವಿರುದ್ಧದ ಹೋರಾಟಕ್ಕೆ ಪಣ ತೊಟ್ಟಿವೆ. ಇದೇ ಕಾರಣಕ್ಕೆ ಉಕ್ರೇನ್‌ನ ಒಡೆಸ್ಸಾದಲ್ಲಿರುವ ತರಬೇತಿ ಕೇಂದ್ರದಲ್ಲಿ ಹಲವು ನವ ಜೋಡಿಗಳು ಸೇರಿದಂತೆ ಹಲವರು ಯುದ್ಧ ತರಬೇತಿ ಪಡೆಯುತ್ತಿದ್ದಾರೆ.

ರಷ್ಯಾ ಪಡೆಗಳಿಂದ ದೇಶದ ರಕ್ಷಣೆಗಾಗಿ ದೇಶದ ಅರ್ಧಕ್ಕಿಂತ ಹೆಚ್ಚು ಆಮದು ಮತ್ತು ರಫ್ತು ವ್ಯವಹಾರಗಳನ್ನು ನಿರ್ವಹಿಸುವ ಒಡೆಸ್ಸಾದಲ್ಲಿ ಯುವ ಜನತೆಗೆ ಯುದ್ಧ ತರಬೇತಿ ಕೇಂದ್ರ ಆರಂಭಿಸಲಾಗಿದೆ. ಈ ಕೇಂದ್ರದಲ್ಲಿ ಪ್ರತಿ ದಿನ 80-150 ಮಂದಿಗೆ ಯುದ್ಧ ಕೌಶಲ ತರಬೇತಿ ನೀಡಲಾಗುತ್ತಿದೆ. ಈ ಕೇಂದ್ರದಲ್ಲಿ ನವ ಜೋಡಿ ಸೇರಿದಂತೆ ಹಲವು ಯುವಕರು ತರಬೇತಿ ಪಡೆಯುತ್ತಿದ್ದಾರೆ.

ಉಕ್ರೇನ್ ಪಡೆಗಳು ಮತ್ತು ನಾಗರಿಕರ ಪ್ರತಿದಾಳಿಯ ಪರಿಣಾಮ ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿ 3 ವಾರಗಳೇ ಕಳೆದಿವೆ. ಆದರೆ, ರಾಜಧಾನಿ ಕೀವ್ ಮತ್ತು ಒಡೆಸ್ಸಾ ಸೇರಿದಂತೆ ಪ್ರಮುಖ ನಗರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೆಣಗಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT