ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ: ವಿಮಾನ ನಿಲ್ದಾಣ ಸಮೀಪ ದಾಳಿ

Last Updated 24 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಟ್ರಿಪೋಲಿ: ಲಿಬಿಯಾದ ಟ್ರಿಪೋಲಿಯಲ್ಲಿರುವ ಮಿಟಿಗಾ ವಿಮಾನ ನಿಲ್ದಾಣದ ಕಾರು ನಿಲುಗಡೆ ತಾಣದ ಮೇಲೆ ಕ್ಷಿಪಣಿ ದಾಳಿ ನಡೆದಿದೆ.

ಲಿಬಿಯಾದಲ್ಲಿ ಕಾರ್ಯಾಚರಣೆಯಲ್ಲಿರುವ ಏಕೈಕ ವಿಮಾನ ನಿಲ್ದಾಣ ಇದಾಗಿದ್ದು,ಘಟನೆಯಿಂದಾಗಿ ಅಂದಾಜು ಮೂರು ಗಂಟೆಗಳ ಕಾಲ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

‘ಟರ್ಮಿನಲ್‌ ಒಳಭಾಗದಲ್ಲಿದ್ದ ವೇಳೆಯಲ್ಲಿ ಭಾರಿ ಸ್ಫೋಟ ಕೇಳಿಸಿತು. ಹೊರಭಾಗದಲ್ಲಿ ಜನರು ಭಯಭೀತರಾಗಿ ಓಡುತ್ತಿದ್ದರು. ಟರ್ಮಿನಲ್‌ ಮುಂಭಾಗದಲ್ಲಿದ್ದ ಹಲವು ಕಾರುಗಳು ಜಖಂಗೊಂಡಿದ್ದವು. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಲಿಬಿಯಾದ ರಾಜಧಾನಿಯನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಖಲೀಫಾ ಹಫ್ತಾರ್‌ಗೆ ನಿಷ್ಠೆಯುಳ್ಳ ಕೆಲ ಪಡೆಗಳು ಮಿಟಿಗಾ ಮೇಲೆ ದಾಳಿ ನಡೆಸುತ್ತಲೇ ಇವೆ. ಆದರೆ ಇವುಗಳು ಟ್ರಿಪೋಲಿಯ ದಕ್ಷಿಣ ಭಾಗದ ಭದ್ರತೆಯನ್ನು ಭೇದಿಸುವಲ್ಲಿ ವಿಫಲವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT