ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ಟ್ರೇಲಿಯಾ ಕಡಲ ತೀರದಲ್ಲಿ ಸಿಕ್ಕಿದ್ದು ಇಸ್ರೊ ರಾಕೆಟ್‌ ಬಿಡಿ ಭಾಗ

Published 1 ಆಗಸ್ಟ್ 2023, 23:58 IST
Last Updated 1 ಆಗಸ್ಟ್ 2023, 23:58 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಆಸ್ಟ್ರೇಲಿಯಾದ ಕಡಲತೀರದಲ್ಲಿ ಕಳೆದ ತಿಂಗಳು ಪತ್ತೆಯಾಗಿದ್ದ ಗುಮ್ಮಟ ಆಕಾರದ ನಿಗೂಢ ವಸ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ರಾಕೆಟ್‌ನ ಭಾಗ ಎಂದು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ (ಎಎಸ್‌ಎ) ಅಂತಿಮ ನಿರ್ಣಯಕ್ಕೆ ಬಂದಿದೆ.

ಪಶ್ಚಿಮ ಆಸ್ಟ್ರೇಲಿಯಾದ ಗ್ರೀನ್ ಹೆಡ್ ಬೀಚ್ ಬಳಿ ಜುಲೈ 15ರಂದು ವಸ್ತು ಪತ್ತೆಯಾಗಿತ್ತು. 

‘ನಿಗೂಢ ವಸ್ತುವಿನ ವಿಚಾರವಾಗಿ ನಾವು ಅಂತಿಮ ನಿರ್ಣಯಕ್ಕೆ ಬಂದಿದ್ದೇವೆ. ಅದು ಇಸ್ರೊ ಹಾರಿಸಿದ್ದ ‘ಪೋಲಾರ್‌ ಉಪಗ್ರಹ ಉಡಾವಣಾ ವಾಹನ (ಪಿಎಸ್‌ಎಲ್‌ವಿ)’ದ ಮೂರನೇ ಹಂತದ ಬಿಡಿ ಭಾಗ ಎಂದು ತೀರ್ಮಾನಿಸಿದ್ದೇವೆ’ ಎಂದು ಎಎಎಸ್‌ಎ ತಿಳಿಸಿದೆ. 

‘ಅವಶೇಷಗಳನ್ನು ನಾವು ಸಂರಕ್ಷಿಸಿಟ್ಟಿದ್ದೇವೆ. ವಿಶ್ವಸಂಸ್ಥೆಯ ಬಾಹ್ಯಾಕಾಶ ಒಪ್ಪಂದಗಳ ಬಾಧ್ಯತೆಗಳ ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಸಂಬಂಧ ನಾವು ಇಸ್ರೊ ಜತೆಗೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಎಎಸ್‌ಎ ತಿಳಿಸಿದೆ

ವಿಶ್ವಸಂಸ್ಥೆಯ ಬಾಹ್ಯಾಕಾಶ ಒಪ್ಪಂದದ ಪ್ರಕಾರ, ಬಾಹ್ಯಾಕಾಶ ಅಧ್ಯಯನಕ್ಕೆ ಸಂಬಂಧಿಸಿದ ಯಾವುದೇ ವಸ್ತು, ಯಾವುದೇ ದೇಶದಲ್ಲಿ ಸಿಕ್ಕರೆ ಅದನ್ನು ಸಂಬಂಧಪಟ್ಟ ದೇಶಕ್ಕೆ ಹಿಂದಿರುಗಿಸಬೇಕಾಗುತ್ತದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT