ಬ್ರಸೆಲ್ಸ್: 'ಉಕ್ರೇನ್‌ನೊಳಗೆ ನ್ಯಾಟೊದ ಸಶಸ್ತ್ರ ಪಡೆಗಳು ಇಲ್ಲ. ಅಲ್ಲದೇ, ಆ ದೇಶಕ್ಕೆ ಸೇನಾ ಪಡೆಯನ್ನು ರವಾನಿಸುವ ಯೋಜನೆಯನ್ನೂ ನಾವು ಹೊಂದಿಲ್ಲ’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ರಷ್ಯಾ–ಉಕ್ರೇನ್ ಸಂಘರ್ಷ: ಉಕ್ರೇನ್ನ 40 ಸೈನಿಕರು, ರಷ್ಯಾದ 50 ಆಕ್ರಮಣಕಾರರ ಸಾವು

ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ಈ ಸಂಗತಿ ಖಚಿತಪಡಿಸಿದ್ದಾರೆ.

‘ಉಕ್ರೇನ್‌ಗೆ ನ್ಯಾಟೊ ಪಡೆಗಳನ್ನು ನಿಯೋಜಿಸುವ ಯಾವುದೇ ಯೋಜನೆ ಮತ್ತು ಉದ್ದೇಶವನ್ನು ನಾವು ಹೊಂದಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ’ ಎಂದು ಅವರು ಹೇಳಿದರು.

ಇದನ್ನೂ ಓದಿ:ದೇಶ ರಕ್ಷಿಸಲು ಬಯಸುವ ಎಲ್ಲರಿಗೂ ಶಸ್ತ್ರಾಸ್ತ್ರ ನೀಡುತ್ತೇವೆ: ಉಕ್ರೇನ್ ಅಧ್ಯಕ್ಷ

‘ಆದರೆ, ನ್ಯಾಟೊ ಸದಸ್ಯ ರಾಷ್ಟ್ರಗಳು ಮತ್ತು ನ್ಯಾಟೊ ಭೂಪ್ರದೇಶದ ಪೂರ್ವ ಭಾಗದಲ್ಲಿ ಸೇನಾ ಪಡೆಗಳ ಉಪಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಿದ್ದೇವೆ’ ಎಂದು ಸ್ಟೋಲ್ಟೆನ್‌ಬರ್ಗ್ ಮಾಹಿತಿ ನೀಡಿದ್ದಾರೆ.

ಉಕ್ರೇನ್ ಪಾಶ್ಚಾತ್ಯ ರಕ್ಷಣಾ ಒಕ್ಕೂಟದ ಪಾಲುದಾರ ರಾಷ್ಟ್ರ. ಆದರೆ ನ್ಯಾಟೊದ ಸದಸ್ಯ ರಾಷ್ಟ್ರವಲ್ಲ ಎಂದೂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಹೇಳಿದ್ದಾರೆ.

ಇದನ್ನೂ ಓದಿ:ಉಕ್ರೇನ್ನಲ್ಲಿ ಧಾರವಾಡ ಜಿಲ್ಲೆ ವಿದ್ಯಾರ್ಥಿನಿ ಸುರಕ್ಷಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.