ಕಠ್ಮಂಡು: ನೇಪಾಳವು ಕೊರೊನಾ ಸಾಂಕ್ರಾಮಿಕದ ನಡುವೆ ಈ ವರ್ಷ ವಿಶ್ವದ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಚಾರಣಕ್ಕಾಗಿ ದಾಖಲೆ ಪ್ರಮಾಣದಷ್ಟು ಪರವಾನಗಿಯನ್ನು ನೀಡಿದೆ.

‘ಈ ವರ್ಷ, ಶುಕ್ರವಾರದ ತನಕ ಮೌಂಟ್ ಎವರೆಸ್ಟ್ ಚಾರಣಕ್ಕಾಗಿ 394 ಪರವಾನಗಿಗಳನ್ನು ನೀಡಲಾಗಿದೆ. 2019ರಲ್ಲಿ 381 ಪರವಾನಗಿಗಳನ್ನು ನೀಡಲಾಗಿತ್ತು’ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಮೀರಾ ಆಚಾರ್ಯ ಅವರು ತಿಳಿಸಿದರು.

ಓದಿ:ಪಿಎಂ ಕೇರ್ಸ್ ಫಂಡ್ ನೆರವಿನಲ್ಲಿ 551 ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ: ಪಿಎಂಒ

ನೇಪಾಳವು ಮೌಂಟ್ ಎವರೆಸ್ಟ್ ಚಾರಣದಿಂದ ಬರುವ ಆದಾಯ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಈ ವಾರ ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಆಗಮಿಸುವ ಮುನ್ನ ಪರ್ವತಾರೋಹಿಗಳು ಕ್ವಾರಂಟೈನ್‌ಗೆ ಒಳಗಾಗುವಂತೆ ನೇಪಾಳ ಸರ್ಕಾರ ಸೂಚಿಸಿದೆ.

ಈವರೆಗೆ ನೇಪಾಳದಲ್ಲಿ 2,97,087 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 3,136 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.