ಕಠ್ಮಂಡು: ‘ಜೆನ್–ಝಿ’ ಪ್ರತಿಭಟನೆ ವೇಳೆ ಹುತಾತ್ಮರಾದವರ ಗೌರವಾರ್ಥವಾಗಿ ನೇಪಾಳದಲ್ಲಿ ಬುಧವಾರ ರಾಷ್ಟ್ರೀಯ ಶೋಕ ದಿನ ಆಚರಿಸಲಾಗಿದ್ದು, ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಸ್ತಬ್ಧವಾಗಿದ್ದವು.

ವಿದೇಶದಲ್ಲಿರುವ ನೇಪಾಳದ ಎಲ್ಲ ರಾಯಭಾರ ಕಚೇರಿಗಳು ಮತ್ತು ಸಂಸ್ಥೆಗಳೂ ಕಾರ್ಯಾಚರಿಸಲಿಲ್ಲ. ಅಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿತ್ತು.

‘ಜೆನ್–ಝಿ’ ಪ್ರತಿಭಟನೆಯಲ್ಲಿ ಮೂವರು ಪೊಲೀಸರು ಸೇರಿದಂತೆ 72 ಮಂದಿ ಮೃತಪಟ್ಟಿದ್ದಾರೆ.

ಸೆಪ್ಟೆಂಬರ್ 8 ಮತ್ತು 9ರಂದು ನಡೆದ ‘ಜೆನ್–ಝಿ’ ಪ್ರತಿಭಟನೆಯಲ್ಲಿ ಮೃತಪಟ್ಟವರನ್ನು ‘ಹುತಾತ್ಮರು’ ಎಂದು ಕರೆಯಲಾಗುವುದೆಂದು ನೂತನ ಪ್ರಧಾನಿ ಸುಶೀಲಾ ಕಾರ್ಕಿ ಅವರು ಭಾನುವಾರ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.