ಮೆಲ್ಬರ್ನ್:ಜಗತ್ತಿನ ನಂ. 1 ಟೆನಿಸ್ ಆಟಗಾರಸರ್ಬಿಯಾದ ನೊವಾಕ್ ಜೊಕೊವಿಚ್ ಅವರ ವೀಸಾವನ್ನು ಆಸ್ಟ್ರೇಲಿಯಾ ಸರ್ಕಾರ ರದ್ದು ಮಾಡಿರುವ ಪ್ರಕರಣದಲ್ಲಿಜೊಕೊವಿಚ್ ಅವರಿಗೆ ಜಯವಾಗಿದೆ.

ವೀಸಾ ರದ್ದು ಮಾಡಿರುವಕ್ರಮವನ್ನು ಆಸ್ಟ್ರೇಲಿಯಾ ಫೆಡರಲ್ ಕೋರ್ಟ್ ರದ್ದು ಮಾಡಿದ್ದು ಅವರಿಗೆಆಸ್ಟ್ರೇಲಿಯಾ ಓಪನ್‌ನಲ್ಲಿ ಆಡಲು ಅನುಮತಿ ನೀಡಿದೆ. ಕೋವಿಡ್ -19 ವಿರುದ್ಧ ಸಂಪೂರ್ಣವಾಗಿ ಲಸಿಕೆ ಪಡೆದ ಪುರಾವೆಗಳಿಲ್ಲದ ಹೊರತಾಗಿಯೂ ಕಳೆದ ವಾರಮೆಲ್ಬರ್ನ್‌ಗೆಬಂದಿಳಿದಿದ್ದನೊವಾಕ್‌ಜೊಕೊವಿಚ್ ಅವರು ಬಂಧನದ ಭೀತಿ ಅಥವಾ ಗಡಿಪಾರಿನ ಭೀತಿ ಎದುರಿಸುತ್ತಿದ್ದರು. ಅವರನ್ನುಮೆಲ್ಬರ್ನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಪಡಿಸಲಾಗಿತ್ತು.

ಕೊರೊನಾ ಸೋಂಕಿಗೆ ಒಳಗಾದವರಿಗೆ ಲಸಿಕೆಯಿಂದ 6 ತಿಂಗಳು ತಾತ್ಕಾಲಿಕ ವಿನಾಯಿತಿ ನೀಡಬಹುದು ಎಂದು ಕೋರ್ಟ್ ಆದೇಶ ನೀಡಿದೆ.ಅದಾಗ್ಯೂಆಸ್ಟ್ರೇಲಿಯಾ ಸರ್ಕಾರದ ವಲಸೆ ಖಾತೆ ಸಚಿವ ಅಲೆಕ್ಸ್ ಹ್ವಾಕ್ ಅವರುಜೊಕೊವಿಚ್ ಅವರ ವೀಸಾವನ್ನು ರದ್ದು ಮಾಡುವ ವಿಶೇಷ ಅಧಿಕಾರ ಹೊಂದಿದ್ದಾರೆ ಎಂದು ಕೋರ್ಟ್‌ಗೆ ಸರ್ಕಾರಿ ವಕೀಲರು ತಿಳಿಸಿದ್ದಾರೆ.

ಆಸ್ಟ್ರೇಲಿಯ ಓಪನ್ ಟೆನಿಸ್ ಕ್ರೀಡಾ ಕೂಟದಲ್ಲಿ ಆಡಲು ಅನುಮತಿ ನೀಡಬೇಕಾಗಿ ಕೋರಿ ಜಾಕೊವಿಚ್ ಸಲ್ಲಿಸಿದ್ದ ಅರ್ಜಿಯನ್ನು ವೈದ್ಯಕೀಯ ಮಂಡಳಿಗಳು ಅನುಮೋದಿಸಿದ್ದವು. ಹೀಗಾಗಿ ಕೂಟದ ಆಯೋಜಕರು ಜಾಕೊವಿಚ್‌ಗೆ ಲಸಿಕೆ ವಿನಾಯಿತಿ ನೀಡಿದ್ದರು. ಇದು ಆಸ್ಟ್ರೇಲಿಯಾದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು.

‘ಆಸ್ಟ್ರೇಲಿಯಾಕ್ಕೆ ಪ್ರವೇಶ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಪೂರೈಸಲು ಜೊಕೊವಿಚ್ ವಿಫಲರಾಗಿದ್ದಾರೆ. ಹೀಗಾಗಿ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ,’ ಎಂದು ಆಸ್ಟ್ರೇಲಿಯನ್ ಗಡಿ ರಕ್ಷಣಾ ಪಡೆ ಪ್ರಕಟಣೆಯಲ್ಲಿ ತಿಳಿಸಿತ್ತು.

ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ ಪೋಸ್ಟ್ಗೆ ₹5 ಕೋಟಿ!

‘ಪ್ರವೇಶಕ್ಕೆ ಮಾನ್ಯವಾದ ವೀಸಾ ಹೊಂದಿರದ ಅಥವಾ ಅವರ ವೀಸಾ ರದ್ದುಗೊಂಡವರನ್ನು ಮೊದಲಿಗೆ ಬಂಧಿಸಲಾಗುತ್ತದೆ ಮತ್ತು ಆಸ್ಟ್ರೇಲಿಯಾದಿಂದ ಹೊರಗೆ ಕಳುಹಿಸಲಾಗುತ್ತದೆ,’ ಎಂದು ಗಡಿ ರಕ್ಷಣಾ ಪಡೆ ತಿಳಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿದ್ದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ’ ನಿಯಮಗಳು ನಿಯಮಗಳೇ. ಗಡಿಗೆ ಸಂಬಂಧಿಸಿದ ವಿಚಾರದಲ್ಲಿ ಅದು ಇನ್ನೂ ಕಠಿಣವಾಗಿರುತ್ತವೆ,’ ಎಂದು ಅವರು ಹೇಳಿದ್ದರು.

‘ವೈಯಕ್ತಿಕವಾಗಿ ನಾನು ಲಸಿಕೆಗಳ ಪರ ಅಲ್ಲ‘ ಎಂದು ಜೊಕೊವಿಚ್ ಹಿಂದೊಮ್ಮೆ ಹೇಳಿದ್ದರು. ‘ಲಸಿಕೆ ಪಡೆಯುವಂತೆ ನನ್ನನ್ನು ಒತ್ತಾಯಿಸುವುದನ್ನು ನಾನು ಇಷ್ಟಪಡಲಾರೆ’ ಎಂದು ಅವರು ಹೇಳಿದ್ದರು.

14 ವರ್ಷದ ಭರತ್ ಸುಬ್ರಮಣಿಯಮ್ ಭಾರತದ 73ನೇ ಚೆಸ್ ಗ್ರ್ಯಾಂಡ್ಮಾಸ್ಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.