ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹ್ಯಾಕಾಶ ನಿಲ್ದಾಣದತ್ತ ರಷ್ಯಾದ ಇಬ್ಬರು, ಅಮೆರಿಕದ ಒಬ್ಬ ಗಗನಯಾತ್ರಿ

Published 15 ಸೆಪ್ಟೆಂಬರ್ 2023, 16:35 IST
Last Updated 15 ಸೆಪ್ಟೆಂಬರ್ 2023, 16:35 IST
ಅಕ್ಷರ ಗಾತ್ರ

ಮಾಸ್ಕೊ (ಎ.ಪಿ): ರಷ್ಯಾದ ಇಬ್ಬರು ಮತ್ತು ಅಮೆರಿಕದ ಒಬ್ಬರು ಗಗನಯಾತ್ರಿಗಳು ಶುಕ್ರವಾರ ರಷ್ಯಾದ ಬಾಹ್ಯಾಕಾಶ ನೌಕೆಯಲ್ಲಿ ಕಜಕಸ್ತಾನದ ಬೈಕೊನುರ್ ಕಾಸ್ಮೊಡ್ರೊಮ್‌ನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಪ್ರಯಾಣ ಆರಂಭಿಸಿದರು.

ನಾಸಾದ ಗಗನಯಾತ್ರಿ ಲೊರಲ್‌ ಒ‘ಹರಾ ಮತ್ತು ರಷ್ಯಾ ಬಾಹ್ಯಾಕಾಶ ಸಂಸ್ಥೆ ರೊಸ್ಕೊಮೊಸ್‌ನ ಗಗನಯಾತ್ರಿಗಳಾದ ಒಲೆಗ್ ಕೊನೊನೆಂಕೊ ಮತ್ತು ನಿಕೊಲಾಯ್‌ ಚುಬ್‌ ಅವರನ್ನು ಹೊತ್ತ ಸೋಯುಜ್‌ ಎಂಎಸ್‌–24 ಗಗನನೌಕೆ ನಭದತ್ತ ಚಿಮ್ಮಿತು.

ಇವರಲ್ಲಿ ಒ‘ಹರಾ ಅವರು ಆರು ತಿಂಗಳು ಹಾಗೂ ಉಳಿದ ಇಬ್ಬರು ಗಗನಯಾತ್ರಿಗಳು ಒಂದು ವರ್ಷ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿಯಲಿದ್ದಾರೆ. ಒ‘ಹರಾ ಮತ್ತು ಚುಬ್ ಇದೇ ಮೊದಲ ಬಾರಿಗೆ ಗಗನಯಾತ್ರೆ ಕೈಗೊಂಡಿದ್ದಾರೆ. ಉಳಿದಂತೆ ಕೊನೊನೆಂಕೊ ಅವರು ಅನುಭವಿಯಾಗಿದ್ದು, ಈಗಾಗಲೇ ನಾಲ್ಕು ಬಾರಿ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT