ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾದಿಂದ ಅಮೆರಿಕ ಸೇನೆ ವಾಪಸಾತಿ ಆದೇಶಕ್ಕೆ ಸಹಿ

ಅಮೆರಿಕದ ಸೇನಾ ವಕ್ತಾರರಿಂದ ಮಾಹಿತಿ
Last Updated 24 ಡಿಸೆಂಬರ್ 2018, 17:50 IST
ಅಕ್ಷರ ಗಾತ್ರ

ವಾಷಿಂಗ್ಟನ್: ಸಿರಿಯಾದಿಂದ ಅಮೆರಿಕ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವ ಆದೇಶಕ್ಕೆ ಸಹಿ ಹಾಕಲಾಗಿದೆ ಎಂದು ಅಮೆರಿಕದ ಸೇನಾ ವಕ್ತಾರ ತಿಳಿಸಿದ್ದಾರೆ.

ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ವಿರುದ್ಧ ಹೋರಾಟದಲ್ಲಿ ನೆರವು ನೀಡಲು ಸಿರಿಯಾದಲ್ಲಿ ಅಮೆರಿಕ ಸೇನೆಯನ್ನು ನಿಯೋಜಿಸಲಾಗಿತ್ತು.

ಟ್ರಂಪ್‌ ಸರ್ಕಾರದ ಈ ನಿರ್ಧಾರವನ್ನು ಟರ್ಕಿ ಸ್ವಾಗತಿಸಿದೆ. ಟರ್ಕಿ ಅಧ್ಯಕ್ಷ ಎರ್ಡೊಗನ್‌ ಮತ್ತು ಟ್ರಂಪ್‌ ಅವರು ಭಾನುವಾರ ದೂರವಾಣಿ ಮೂಲಕ ಮಾತನಾಡಿ ಎರಡೂ ರಾಷ್ಟ್ರಗಳ ಮಿಲಿಟರಿ ಕ್ಷೇತ್ರದಲ್ಲಿ ಸಹಕಾರ ನೀಡಲು ಒಪ್ಪಿಕೊಂಡಿದ್ದರು.

ಸಿರಿಯಾದಲ್ಲಿ ಅಳಿದುಳಿದಿರುವ ಐಎಸ್‌ ಉಗ್ರರನ್ನೂ ನಿರ್ನಾಮ ಮಾಡಲಾಗುವುದು ಎಂದು ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಭರವಸೆ ನೀಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾನುವಾರ ಮಧ್ಯರಾತ್ರಿಟ್ವೀಟ್‌ ಮಾಡಿದ್ದರು.

‘ಎರ್ಡೊಗನ್ ಅವರಂಥ ಮನುಷ್ಯ ಈ ಕಾರ್ಯವನ್ನು ಸಮರ್ಥವಾಗಿ ನೆರವೇರಿಸುವರು’ ಎಂದೂ ಟ್ರಂಪ್‌ ಹೇಳಿದ್ದಾರೆ.

ಸಿರಿಯಾದಲ್ಲಿರುವ ಅಮೆರಿಕದ ಸುಮಾರು 2000 ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಅವಸರದ ತೀರ್ಮಾನ ಎಂದು ರಿಪಬ್ಲಿಕನ್‌ ಪಕ್ಷದವರೂ ಸೇರಿದಂತೆ ಅಮೆರಿಕದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಅಂತರರಾಷ್ಟ್ರೀಯ ಮೈತ್ರಿಕೂಟದ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT