ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೀನ್‌ಕಾರ್ಡ್‌ ನಿರೀಕ್ಷೆಯಲ್ಲಿ 10 ಲಕ್ಷ ಭಾರತೀಯರು

Published 6 ಸೆಪ್ಟೆಂಬರ್ 2023, 13:36 IST
Last Updated 6 ಸೆಪ್ಟೆಂಬರ್ 2023, 13:36 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವುದಕ್ಕಾಗಿ ನೀಡುವ, ಉದ್ಯೋಗ ಆಧಾರಿತ ಗ್ರೀನ್‌ ಕಾರ್ಡ್‌ಗಾಗಿ 10.5 ಲಕ್ಷಕ್ಕೂ ಹೆಚ್ಚು ಭಾರತೀಯರು ಕಾಯುತ್ತಿದ್ದಾರೆ.

ಈ ಕಾರ್ಡ್‌ ಪಡೆಯುವುದಕ್ಕಾಗಿ ಕಾಯುತ್ತಿರುವವರ ಸಂಖ್ಯೆ ದೊಡ್ಡದು. ದೇಶವಾರು ನಿಗದಿ ಮಾಡಿರುವ ಮಿತಿಯಿಂದಾಗಿ ಬಹಳ ವರ್ಷಗಳ ವರೆಗೆ ಕಾಯುವುದು ಅನಿವಾರ್ಯವಾಗಿದೆ.

ಕಾರ್ಡ್‌ಗಾಗಿ ಕಾಯುತ್ತಿರುವವರ ಸಂಖ್ಯೆ ಎಷ್ಟು ದೊಡ್ಡದಿದೆ ಅಂದರೆ, ಗ್ರೀನ್‌ ಕಾರ್ಡ್‌ ಕೈಸೇರುವ ಮುನ್ನವೇ 4 ಲಕ್ಷದಷ್ಟು ಭಾರತೀಯರು ಮೃತಪಡಬಹುದು ಎಂದು ಮೂಲಗಳು ಹೇಳಿವೆ.

ಗ್ರೀನ್‌ ಕಾರ್ಡ್‌ಗಾಗಿ ಕಾಯುತ್ತಿರುವವ ಸಂಖ್ಯೆ ಈ ವರ್ಷ ದಾಖಲೆಯ 10.8 ಲಕ್ಷದ ಗಡಿ ತಲುಪಿದೆ. ಈ ಪೈಕಿ 10.1 ಲಕ್ಷದಷ್ಟು (ಶೇ 63) ಭಾರತೀಯರಿದ್ದರೆ, ಚೀನಾ ಪ್ರಜೆಗಳ ಸಂಖ್ಯೆ 2.50 ಲಕ್ಷ (ಶೇ 14) ಎಂಬುದು ‘ಕ್ಯಾಟೊ ಇನ್ಸ್‌ಟಿಟ್ಯೂಟ್‌’ನ ಡೇವಿಡ್‌ ಬಿಯರ್ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT