ವಾಷಿಂಗ್ಟನ್: ವಿಶ್ವದಲ್ಲಿ ಅಮೆರಿಕದ ನಾಯಕತ್ವ ಮರುಸ್ಥಾಪಿಸಲು ದೇಶಿಯ ಸವಾಲುಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಅಮೆರಿಕದ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರು ಹೇಳಿದರು.

ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆ ಆಗಿರುವ ಜೋ ಬೈಡನ್ ಅವರುಮಂಗಳವಾರ ವಿಲ್ಮಿಂಗ್ಟನ್‌ನಲ್ಲಿ ತಮ್ಮ ರಾಷ್ಟ್ರೀಯ ಭದ್ರತಾ ತಂಡವನ್ನು ಘೋಷಿಸಿದರು. ಈ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಕಮಲಾ ಹ್ಯಾರಿಸ್, ‘ನಾವು ಚುನಾಯಿತ ನಾಯಕರಾಗಿ ಶ್ವೇತಭವನಕ್ಕೆ ಕಾಲಿಟ್ಟಾಗ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ನಮಗೆ ತಿಳಿದಿತ್ತು’ ಎಂದು ತಿಳಿಸಿದರು.

‘ಕೋವಿಡ್ ಪಿಡುಗನ್ನು ಹತೋಟಿಗೆ ತರುವುದು ನಮ್ಮ ಮುಂದಿರುವ ಮೊದಲ ಸವಾಲು. ಇದರೊಂದಿಗೆ ದೇಶದ ಆರ್ಥಿಕತೆಯನ್ನು ಜವಾಬ್ದಾರಿಯುತವಾಗಿ ತೆರೆಯಬೇಕಾಗಿದೆ. ದೇಶಿಯ ಸವಾಲುಗಳ ನಿರ್ವಹಣೆ ಅಮೆರಿಕದ ನಾಯಕತ್ವ ಮರುಸ್ಥಾಪನೆಗೆ ಅಡಿಪಾಯವಾಗಿದೆ’ ಎಂದು ಅವರು ಹೇಳಿದರು.

‘ನಾವು ಈ ಕೆಲಸ ಮಾಡಲು ಸಿದ್ಧರಿದ್ಧೇವೆ. ಅಮೆರಿಕದ ಮೈತ್ರಿಗಳನ್ನು ಒಗ್ಗೂಡಿಸುವ ಮತ್ತು ನವೀಕರಿಸುವ ಅಗತ್ಯವಿದೆ. ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಗಳನ್ನು ಮರುಸ್ಥಾಪಿಸಿ, ಅವುಗಳನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ. ಹವಾಮಾನ ಬದಲಾವಣೆಯ ಅಪಾಯವನ್ನು ನಿರ್ವಹಣೆ ಮಾಡಬೇಕಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಬೈಡನ್ ಅವರು ಮಂಗಳವಾರ ವಿದೇಶಾಂಗ ಕಾರ್ಯದರ್ಶಿಯಾಗಿ ಅಂಥೋನಿ ಬ್ಲಿಂಕೆನ್, ಹೋಮ್ ಲ್ಯಾಂಡ್ ಭದ್ರತಾ ಕಾರ್ಯದರ್ಶಿಯಾಗಿ ಅಲೆಜಾಂಡ್ರೊ ಮಯೋರ್ಕಾಸ್, ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿಯಾಗಿ ಲಿಂಡಾ ಥೋಮಸ್ ಗ್ರೀನ್‌ಫೀಲ್ಡ್, ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾಗಿ ಅವ್ರಿಲ್ ಹೈನ್ಸ್ ಅವರನ್ನು ನಾಮ ನಿರ್ದೇಶನ ಮಾಡುವುದಾಗಿ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.