ಮೆಲ್ಬೋರ್ನ್: ತೂಕ ಇಳಿಸಲು, ಮಧುಮೇಹವನ್ನು ನಿಯಂತ್ರಿಸಲು ಈ ಔಷಧಿಗಳನ್ನು ಬಳಸಿದರೆ ನಿಮ್ಮ ಕಣ್ಣುಗಳನ್ನೇ ಕಳೆದುಕೊಳ್ಳಬೇಕಾಗುತ್ತದೆ.!

GLP-1 ಮಾದರಿ ಒಝೆಂಪಿಕ್ (Ozempic), ವೇಗೋವಿ (Wegovy), ಮೌಂಜಾರೊ (Mounjaro) ಎಂಬ ಔಷಧಿಗಳನ್ನು ಬಳಸುವುದರಿಂದ ಕಣ್ಣಿನ ದೃಷ್ಠಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಮೆಲ್ಬೋರ್ನ್ ಕಾರೋಲಿನ್ಸ್ಕಾಇನ್ಸ್ಟಿಟ್ಯೂಟ್ ನ ಲೇಖಕ ಪೀಟ್ ಎ ವಿಲಿಯಮ್ಸ್ ತಮ್ಮ ಲೇಖನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಒಝೆಂಪಿಕ್, ವೇಗೋವಿ , ಮೌಂಜಾರೊ ಔಷಧಿಗಳನ್ನು ಬಳಸುವುದರಿಂದ ಹಸಿವನ್ನು ನಿಯಂತ್ರಿಸಿ, ತೂಕ ಇಳಿಕೆಗೆ ಸಹಾಯ ಮಾಡುತ್ತವೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತವೆ.

ಈ ಔಷಧಿಗಳನ್ನು ಸೇವಿಸುವುದರಿಂದ ಆಗುವ ಪರಿಣಾಮಗಳು

NAION (ನಾನ್-ಆರ್ಟೆರಿಟಿಕ್ ಆಂಟೀರಿಯರ್ ಇಸ್ಕೆಮಿಕ್ ಆಪ್ಟಿಕ್ ನ್ಯೂರೋಪತಿ): ಕಣ್ಣಿನ ಸ್ಟ್ರೋಕ್ ಎಂದೂ ಕರೆಯುತ್ತಾರೆ. ಇದು ಕಣ್ಣಿನ ಅಪರೂಪದ ಸಮಸ್ಯೆಯಾಗಿದೆ.

ಕಣ್ಣಿನ ನರಕೋಶಗಳಿಗೆ ರಕ್ತ ಪೂರೈಕೆ ಕಡಿಮೆಯಾಗಿ ನೇರವಾಗಿ ಕಣ್ಣಿನ ದೃಷ್ಟಿಯ ಮೇಲೆ ಪರಿಣಾಮ ಬೀರಬಹುದು.

ಈ ವಿಚಾರಕ್ಕೆ ಸಂಬಂಧಿಸಿದಂತೆ 2024 ರ ಅಧ್ಯಯನವು, ಮಧುಮೇಹ, ತೂಕ ಇಳಿಕೆಗೆ ಈ ಔಷಧಿಗಳನ್ನು ಬಳಸಿದವರು ಎಂಟು ಪಟ್ಟು ಹೆಚ್ಚು ಅಪಾಯದಲ್ಲಿದ್ದಾರೆ ಎಂದು ಅಧ್ಯಯನ ಹೇಳಿದೆ.

GLP-1 ಔಷಧಿಗಳನ್ನು ಸೇವಿಸುತ್ತಿರುವವರು ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಈ ಔಷಧಿ ಸೇವನೆಯಿಂದ ಕೆಲವು ಅಪಾಯಗಳಿದ್ದರೂ ಅವುಗಳಿಂದ ದೊರೆಯುವ ಪ್ರಯೋಜನಗಳು ಹೆಚ್ಚು. ಆದ್ದರಿಂದ ಈ ಔಷಧಿಗಳನ್ನು ಸೇವಿಸುವ ಮುನ್ನ ವೈದ್ಯರೊಂದಿಗೆ ನಿಯಮಿತ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.