ಲಂಡನ್: ಬ್ರಿಟನ್ ರಾಜಧಾನಿ ಲಂಡನ್ನಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಕಿಟಕಿಗಳನ್ನು ಒಡೆದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಉಂಟಾಗಿರುವ ಮಧ್ಯೆಯೇ ಈ ಘಟನೆ ನಡೆದಿದೆ. ಲಂಡನ್ನಲ್ಲಿ ಭಾರತೀಯ ಮತ್ತು ಪಾಕಿಸ್ತಾನಿ ವಲಸಿಗರಿಂದ ಈ ಸಂಬಂಧ ಪರ–ವಿರೋಧ ಪ್ರತಿಭಟನೆಗಳು ನಡೆದಿವೆ.

41 ವರ್ಷದ ಅಂಕಿತ್ ಲವ್ ಅವರನ್ನು ಭಾನುವಾರ ಬಂಧಿಸಲಾಗಿದ್ದು, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರು ತಿಳಿಸಿದ್ದಾರೆ. ಭಾನುವಾರ ಮುಂಜಾನೆ ಪಾಕಿಸ್ತಾನ ಹೈಕಮಿಷನ್ ಕಟ್ಟಡದ ಕಿಟಕಿಗಳನ್ನು ಒಡೆದಿದ್ದಾರೆ ಎಂಬ ವರದಿ ತಿಳಿಸಿದೆ.

ಸದ್ಯ, ಲವ್, ಪೊಲೀಸ್ ಕಸ್ಟಡಿಯಲ್ಲಿದ್ದು, ಇಂದು ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಲಾಗುತ್ತದೆ.

ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಭಾರತೀಯ ಸಮುದಾಯದ ಸಂಘಟನೆಗಳು ಶುಕ್ರವಾರ ಆಯೋಜಿಸಿದ್ದ ಪ್ರತಿಭಟನೆಯ ನಂತರ ಈ ಘಟನೆ ಸಂಭವಿಸಿದೆ.

ಹೈಕಮಿಷನ್ ಬೆಂಬಲದೊಂದಿಗೆ ಪಾಕಿಸ್ತಾನಿ ಪ್ರತಿಭಟನಕಾರರ ಗುಂಪು, ಭಾರತದ ಪರ ಘೋಷಣೆಗಳು ಕೇಖದಂತೆ ಮಾಡಲು ಧ್ವನಿವರ್ಧಕಗಳನ್ನು ಬಳಸಿತ್ತು.

ಶುಕ್ರವಾರ ಮಧ್ಯ ಲಂಡನ್ನಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಕಟ್ಟಡದ ಬಾಲ್ಕನಿಯಿಂದ ಭಾರತೀಯ ಪ್ರತಿಭಟನಾಕಾರರಿಗೆ ಬೆದರಿಕೆ ಒಡ್ಡಿದ್ದ ಅಧಿಕಾರಿಯೊಬ್ಬ ಕುತ್ತಿಗೆ ಸೀಳುವ ಸನ್ನೆ ಮಾಡಿದ್ದ.
.ಈ ಸಂದರ್ಭದಲ್ಲಿ ಜಮ್ಮು–ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನಕ್ಕೆ ಬೇಡಿಕೆ ಇಡಲ್ಲ: ಓಮರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.