ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೆಶಾವರ ಮಸೀದಿ ದಾಳಿ: ಪೊಲೀಸ್ ಸಮಸ್ತ್ರ ಧರಿಸಿ ಭದ್ರತಾ ಪಡೆ ಕಣ್ತಪ್ಪಿಸಿದ್ದ ಉಗ್ರ

Last Updated 2 ಫೆಬ್ರುವರಿ 2023, 7:54 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದ ಪೆಶಾವರದಲ್ಲಿನ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆಸಿದ ಉಗ್ರ, ಪೊಲೀಸ್‌ ಸಮವಸ್ತ್ರ ಧರಿಸಿ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿದ್ದ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಖೈಬರ್‌ ಪಕ್ತುಂಖ್ವಾ ಪ್ರಾಂತ್ಯದ ಪೆಶಾವರದಲ್ಲಿರುವ ಪೊಲೀಸ್‌ ಪ್ರಧಾನ ಕಚೇರಿ ಸಮೀಪವೇ ಇರುವ ಮಸೀದಿಯಲ್ಲಿ ಸೋಮವಾರ (ಜನವರಿ 30) ದಾಳಿ ನಡೆದಿತ್ತು. ಈ ವೇಳೆ 100ಕ್ಕೂ ಹೆಚ್ಚು ಮಂದಿ ಮೃತಪಟ್ಟು, 220ಕ್ಕಿಂತ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 17 ಶಂಕಿತರನ್ನು ಬಂಧಿಸಲಾಗಿದೆ.

ಬಾಂಬ್‌ ದಾಳಿಕೋರ ಮೋಟಾರ್‌ಸೈಕಲ್‌ನಲ್ಲಿ ಈ ಪ್ರದೇಶದಲ್ಲಿ ಅಡ್ಡಾಡಿದ್ದ ಎಂದು ಪ್ರಾಂತೀಯ ಪೊಲೀಸ್‌ ಮುಖ್ಯಸ್ಥ ಮೋಝಮ್‌ ಝಾ ಅನ್ಸಾರಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT