ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷದ ಸಂಭ್ರಮಾಚರಣೆ ನಿಷೇಧ ಮಾಡಿದ ಪಾಕಿಸ್ತಾನ: ಕಾರಣ ಏನು?

ಪಾಕಿಸ್ತಾನದ ಹಂಗಾಮಿ ಪ್ರಧಾನ ಮಂತ್ರಿ ಅನ್ವರುಲ್ಲಾ ಹಕ್ ಖಾಕರ್ ಆದೇಶ
Published 29 ಡಿಸೆಂಬರ್ 2023, 2:51 IST
Last Updated 29 ಡಿಸೆಂಬರ್ 2023, 2:51 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: 2024ರ ಹೊಸ ವರ್ಷದ ಪ್ರಯುಕ್ತ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆಗಳನ್ನು ನಿಷೇಧಿಸಲಾಗಿದೆ.

ಪ್ಯಾಲೆಸ್ಟೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಹಾಗೂ ಪ್ಯಾಲೆಸ್ಟೀನ್ ಜನರಿಗೆ ಬೆಂಬಲ ಸೂಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನದ ಹಂಗಾಮಿ ಪ್ರಧಾನ ಮಂತ್ರಿ ಅನ್ವರುಲ್ಲಾ ಹಕ್ ಖಾಕರ್ ಗುರುವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡುವಾಗ ತಿಳಿಸಿದ್ದಾರೆ.

ಪ್ಯಾಲೆಸ್ಟೀನ್‌ನ ನಮ್ಮ ಸಹೋದರ–ಸಹೋದರಿಯರು ಅನುಭವಿಸುತ್ತಿರುವ ನೋವನ್ನು ನಾವು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಸಂಭ್ರಮಾಚರಣೆಗಳನ್ನು ಮಾಡುವುದು ಸರಿಯಲ್ಲ. ನಾವು ಪ್ಯಾಲೆಸ್ಟೀನ್‌ ಜೊತೆ ಇದ್ದೇವೆ ಎಂಬುದನ್ನು ತೋರಿಸಲು ಹೊಸ ಸಂಭ್ರಮಾಚರಣೆಗಳನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇಸ್ರೇಲ್ ನಡೆಸುತ್ತಿರುವ ಯುದ್ಧದಲ್ಲಿ ಇದುವರೆಗೆ 21 ಸಾವಿರ ಪ್ಯಾಲೆಸ್ಟೀನ್‌ ಜನ ಸತ್ತಿದ್ದಾರೆ. 9,000ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ಧಾರೆ. ಇಸ್ರೇಲ್ ಹಿಂಸೆಯ ಹಾಗೂ ಅನ್ಯಾಯದ ಪರಮಾವಧಿಯನ್ನು ಮೀರಿದೆ ಎಂದು ಅನ್ವರುಲ್ಲಾ ಕಿಡಿಕಾರಿದ್ದಾರೆ.

ಪಾಕಿಸ್ತಾನ ಹಾಗೂ ಜಗತ್ತಿನ ಎಲ್ಲ ಮುಸ್ಲಿಂ ರಾಷ್ಟ್ರಗಳು ಪ್ಯಾಲೆಸ್ಟೀನ್‌ ಬೆಂಬಲಕ್ಕೆ ಇರಲಿವೆ. ಪ್ಯಾಲೆಸ್ಟೀನ್‌ಗೆ ಎರಡು ಹಂತದಲ್ಲಿ ನೆರವು ಕಳುಹಿಸಿ ಕೊಡಲಾಗಿದೆ, ನೆರವು ಮುಂದುವರೆಸಲಾಗುವುದು ಎಂದು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ವಿವಿಧ ವೇದಿಕೆಗಳಲ್ಲಿ ಇಸ್ರೇಲ್ ನಡೆಸುತ್ತಿರುವ ರಕ್ತಪಾತವನ್ನು ಪಾಕಿಸ್ತಾನ ಎತ್ತಿ ತೋರಿಸಿದೆ ಎಂದು ಅನ್ವರುಲ್ಲಾ ಪ್ರತಿಪಾದಿಸಿದ್ದಾರೆ.

ಪಾಕಿಸ್ತಾನದ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಫೆಬ್ರುವರಿ 8 ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT