ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಜಾ: 38 ಸಾವಿರ ದಾಟಿದ ಸಾವಿನ ಸಂಖ್ಯೆ

Published 4 ಜುಲೈ 2024, 14:20 IST
Last Updated 4 ಜುಲೈ 2024, 14:20 IST
ಅಕ್ಷರ ಗಾತ್ರ

ಗಾಜಾ: ಇಸ್ರೇಲ್ ಮತ್ತು ಹಮಾಸ್‌ ಬಂಡುಕೋರರ ನಡುವೆ ಯುದ್ಧ ಆರಂಭವಾದ ಬಳಿಕ ಸಾವಿಗೀಡಾದ ಪ್ಯಾಲೆಸ್ಟೀನಿಯರ ಸಂಖ್ಯೆ 38 ಸಾವಿರದ ಗಡಿ ದಾಟಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.

‘ಕಳೆದ 24 ಗಂಟೆಗಳ ಅವಧಿಯಲ್ಲಿ 58 ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದ್ದು, ಸಾವಿನ ಸಂಖ್ಯೆ 38,011ಕ್ಕೆ ತಲುಪಿದೆ. ಯುದ್ಧದಲ್ಲಿ 87 ಸಾವಿರ ಮಂದಿ ಗಾಯಗೊಂಡಿದ್ದಾರೆ’ ಎಂದು ತಿಳಿಸಿದೆ. 

ಸತ್ತವರಲ್ಲಿ ನಾಗರಿಕರು ಎಷ್ಟು ಮಂದಿ ಇದ್ದಾರೆ ಹಾಗೂ ಹಮಾಸ್‌ ಬಂಡುಕೋರರ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ಸಚಿವಾಲಯವು ಮಾಹಿತಿ ನೀಡಿಲ್ಲ. ಆದರೆ ಮೃತಪಟ್ಟವರಲ್ಲಿ ಬಹುತೇಕ ಮಂದಿ ಮಹಿಳೆಯರು ಮತ್ತು ಮಕ್ಕಳು ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT