ನ್ಯೂಯಾರ್ಕ್/ ವಾಷಿಂಗ್ಟನ್: ‘ಭಾರತ, ರಷ್ಯಾ ಹಾಗೂ ಚೀನಾದ ಅಧ್ಯಕ್ಷರು ಏಕತೆ ಪ್ರದರ್ಶಿಸಿರುವುದು ಸಮಸ್ಯಾತ್ಮಕ ನಡೆಯಾಗಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವಾರೊ ತಿಳಿಸಿದ್ದಾರೆ.

‘ಭಾರತಕ್ಕೆ ಅಮೆರಿಕ, ಯುರೋಪ್, ಉಕ್ರೇನ್ ಅಗತ್ಯವೇ ಹೊರತು ರಷ್ಯಾ ಅಲ್ಲ’ ಎಂದು ಹೇಳಿದ್ದಾರೆ.

ಚೀನಾದ ಟಿಯಾನ್ಜಿನ್ನಲ್ಲಿ ನಡೆದ ‘ಶಾಂಘೈ ಸಹಕಾರ ಸಂಘಟನೆಯ’ (ಎಸ್ಸಿಒ) ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದರು.

ಮೂವರೂ ನಾಯಕರ ಏಕತೆ ಪ್ರದರ್ಶನದ ಕುರಿತು ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಪತ್ರಕರ್ತರು ಪ್ರಶ್ನಿಸಿದರು. ಆಗ ನವಾರೊ, ‘ಇದು ಸಮಸ್ಯಾತ್ಮಕ... ಇದು ಸಮಸ್ಯಾತ್ಮಕ‘ ಎಂದು ಪುನರುಚ್ಚರಿಸಿದರು.

‘ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನು ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಅತಿ ದೊಡ್ಡ ಸರ್ವಾಧಿಕಾರಿಗಳ ಜೊತೆಗೆ ಏಕತೆ ಪ್ರದರ್ಶಿಸಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ಇದು ಅರ್ಥಹೀನ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮೋದಿ ಅವರು ಏನು ಚಿಂತಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಹಲವು ದಶಕಗಳಿಂದಲೂ ಚೀನಾದ ಜೊತೆಗೆ ಭಾರತವು ಶೀತಲ ಸಮರ ಹಾಗೂ ನೇರ ಸಮರದಲ್ಲಿ ಭಾಗಿಯಾಗಿದೆ. ಅವರಿಗೆ ನಮ್ಮ ಅಗತ್ಯವಿದೆ ಎಂಬುದನ್ನು ಭಾರತದ ಪ್ರಧಾನಿ ಅರಿತಿರಬೇಕು. ಯುರೋಪ್, ಉಕ್ರೇನ್ ಜೊತೆಗೆ ನಿಲ್ಲಬೇಕು, ರಷ್ಯಾದ ಜೊತೆಗಲ್ಲ. ಅವರು ರಷ್ಯಾದಿಂದ ಕಚ್ಚಾತೈಲ ಖರೀದಿಸುವುದನ್ನು ನಿಲ್ಲಿಸಬೇಕು’ ಎಂದು ನವಾರೊ ಆಗ್ರಹಿಸಿದರು.

‘ಜನಸಂಖ್ಯೆ ಆಧರಿಸಿಯೂ ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಕಮ್ಯುನಿಸ್ಟ್ ಚೀನಾದ ಜೊತೆಗೆ ದಶಕದಿಂದಲೂ ಶೀತಲ ಸಮರದಲ್ಲಿ ತೊಡಗಿಸಿಕೊಂಡಿದೆ. ಚೀನಾವು ಪಾಕಿಸ್ತಾನದ ಸೇನೆಗೆ ಹಣಕಾಸು ಒದಗಿಸುತ್ತಿದ್ದು, ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ನೆರವಾಗುತ್ತಿದೆ’ ಎಂದು ಹೇಳಿದರು.

‘ಮೋದಿ ಹೆಜ್ಜೆ ಹಾಕಲಿ’

ಉಕ್ರೇನ್ನಲ್ಲಿ ಶಾಂತಿ ಸ್ಥಾಪಿಸುವ ಕುರಿತು ಮಾತನಾಡಿದ ಪೀಟರ್ ನವಾರೊ ‘ಹಲವು ಮಾರ್ಗಗಳು ಮುಂದಿವೆ. ನವದೆಹಲಿಯೂ ಕೈ ಜೋಡಿಸಬೇಕು. ಮೋದಿ ಅವರು ಹೆಜ್ಜೆಹಾಕುವ ಸಮಯ ಬಂದಿದೆ’ ಎಂದರು. ‘ಮೋದಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನಾನು ಭಾರತೀಯರನ್ನು ಅತೀಯಾಗಿ ಪ್ರೀತಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.