ಸಿಂಗಪುರ: ಸಿಂಗಪುರದಲ್ಲಿ ಇದೇ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತದ ಮೂಲದವರಿಗೂ ತಮ್ಮ ಪಕ್ಷದ ಟಿಕೆಟ್ ನೀಡಲಾಗುವುದು ಎಂದು ಪ್ರಧಾನಿ ಲಾರೆನ್ಸ್ ವಾಂಗ್ ಭಾನುವಾರ ಹೇಳಿದ್ದಾರೆ.

ತಮಿಳು ಪತ್ರಿಕೆ ‘ತಮಿಳ್ ಮುರಸು’ ಆಯೋಜಿಸಿದ್ದ ‘ವಾಂಗ ಇಪ್ಪೊ ಪೆಸಲಾಮ್ ಚಾಟ್’ (ಬನ್ನಿ, ತಮಿಳಿನಲ್ಲಿ ಮಾತನಾಡೋಣ) ಕಾರ್ಯಕ್ರಮದಲ್ಲಿ ಮಾತನಾಡಿದ ವಾಂಗ್ ಅವರು, ‘ಭಾರತ ಮೂಲದವರು ಸಿಂಗಪುರಕ್ಕೆ ನೀಡಿರುವ ಅನನ್ಯ ಕೊಡುಗೆಯನ್ನು ಗೌರವಿಸುವ ಸಲುವಾಗಿ, ಮುಂಬರುವ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡಲು ನಿರ್ಧರಿಸಲಾಗಿದೆ’ ಎಂದು ಘೋಷಿಸಿದರು.

ಸಿಂಗಪುರದಲ್ಲಿ ಭಾರತೀಯರು ಅಲ್ಪ ಪ್ರಮಾಣದಲ್ಲೇ ಇದ್ದರೂ, ಕೈಗಾರಿಕೆ, ವ್ಯವಹಾರ, ಸೇವಾ ವಲಯಕ್ಕೆ ಅವರ ಕೊಡುಗೆ ಅಪಾರವಾದದ್ದು ಎಂದು ಅವರು ಶ್ಲಾಘಿಸಿದರು.

ಆಡಳಿತಾರೂಢ ಪೀಪಲ್ಸ್ ಆಕ್ಷನ್ ಪಾರ್ಟಿ (ಪಿಎಪಿ) ಪಕ್ಷವು 2020ರ ಚುನಾವಣೆಯಲ್ಲಿ ಭಾರತ ಮೂಲದ ಒಬ್ಬರಿಗೂ ಟಿಕೆಟ್ ನೀಡದೇ ಇದ್ದದ್ದು ಟೀಕೆಗೆ ಗುರಿಯಾಗಿತ್ತು. 93 ಸಂಸದ ಸ್ಥಾನಗಳ ಪೈಕಿ 83ರಲ್ಲಿ ಪಿಎಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.