ನಜಾಫ್, ಇರಾಕ್: ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಇರಾಕ್‌ನ ಅತ್ಯುನ್ನತ ಷಿಯಾ ಧರ್ಮಗುರು ಅಯತೊಲ್ಲಾ ಅಲಿ ಅಲ್-ಸಿಸ್ತಾನಿ ಅವರನ್ನು ಶನಿವಾರ ಭೇಟಿಯಾದರು.ಈ ವೇಳೆ ಇರಾಕ್‌ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಧರ್ಮ ಒಗ್ಗಟಿನಿಂದ ಸಹಭಾಳ್ವೆ ಮಾಡುವುದರ ಕುರಿತಾಗಿ ಚರ್ಚೆ ನಡೆಸಿದರು.

ನಜಾಫ್‌ನಲ್ಲಿರುವ ಅಯತೊಲ್ಲಾ ಅಲಿ ಅಲ್-ಸಿಸ್ತಾನಿ ಅವರ ನಿವಾಸದಲ್ಲಿ ಉಭಯ ನಾಯಕರು ಸಭೆ ನಡೆಸಿದರು. ಇದೇ ಮೊದಲ ಬಾರಿ ಪೋಪ್ ಫ್ರಾನ್ಸಿಸ್ ಅವರು ಇರಾಕ್‌ನ ಉನ್ನತ ಧರ್ಮಗುರುವನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರ ಸುರಕ್ಷತೆಗಾಗಿ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಸಿಸ್ತಾನಿ ಅವರೊಂದಿಗಿನ 55 ನಿಮಿಷದ ಸಭೆಯ ಬಳಿಕ ಪೋಪ್ ಅವರು ದಕ್ಷಿಣ ಇರಾಕ್‌ನಲ್ಲಿರುವ ಪ್ರಸಿದ್ಧ ಪ್ರಾಚೀನ ಸ್ಥಳ ಯುರ್‌ಗೆ ಭೇಟಿ ನೀಡಿದರು.

ಈ ಹಿಂದೆ ಪೋಪ್ ಫ್ರಾನ್ಸಿಸ್ ಅವರು ಟರ್ಕಿ, ಜೊರ್ಡನ್, ಈಜಿಪ್ಟ್, ಬಾಂಗ್ಲಾದೇಶ, ಅಜೆರ್ಬೈಜಾನ್, ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) , ಪ್ಯಾಲೆಸ್ಟೈನ್‌ಗೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.