ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋರ್ಚುಗಲ್‌: ಕ್ಯಾಥೋಲಿಕ್ ಚರ್ಚ್ ಪಾದ್ರಿಗಳಿಂದ 5,000 ಬಾಲಕಿಯರ ಮೇಲೆ ಅತ್ಯಾಚಾರ!

Last Updated 14 ಫೆಬ್ರುವರಿ 2023, 9:33 IST
ಅಕ್ಷರ ಗಾತ್ರ

ಲಿಸ್ಬೆನ್: ಪೋರ್ಚುಗಲ್‌ನಲ್ಲಿ 1950 ರಿಂದ ಇಲ್ಲಿಯವರೆಗೆ ಕ್ಯಾಥೋಲಿಕ್ ಚರ್ಚ್ ಪಾದ್ರಿಗಳು ಸುಮಾರು 5,000 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪಾದ್ರಿಗಳ ಲೈಂಗಿಕ ಕಿರುಕುಳದ ಬಗ್ಗೆ ಪೋರ್ಚುಗೀಸ್ ಕ್ಯಾಥೋಲಿಕ್ ಚರ್ಚ್ ಒಕ್ಕೂಟ ನೇಮಿಸಿದ್ದ ಸ್ವತಂತ್ರ ತನಿಖಾ ಆಯೋಗ ಲಿಸ್ಬೆನ್‌ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ಮಾಹಿತಿ ನೀಡಿದೆ.

ಆಯೋಗವು ಕಳೆದ ಒಂದು ವರ್ಷದಲ್ಲಿ 500 ಸಂತ್ರಸ್ತೆಯರನ್ನು ಪತ್ತೆ ಹಚ್ಚಿ ಅವರ ಹೇಳಿಕೆಗಳನ್ನು ದಾಖಲಿಸಿದೆ. ಆಯೋಗದ ತನಿಖೆ ಪ್ರಕಾರ ಕ್ಯಾಥೋಲಿಕ್ ಚರ್ಚ್ ಪಾದ್ರಿಗಳು ಪೋರ್ಚುಗಲ್‌ನಲ್ಲಿ 1950 ರಿಂದ ಇಲ್ಲಿಯವರೆಗೆ ಸುಮಾರು 5000 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಕ್ಯಾಥೋಲಿಕ್ ಚರ್ಚ್‌ಗಳ ಪ್ರಾಬಲ್ಯ ಹೊಂದಿರುವ ಪೋರ್ಚುಗಲ್‌ನಲ್ಲಿ ಸಂತ್ರಸ್ತರು ಆರಂಭದಲ್ಲಿ ಹೇಳಿಕೆ ದಾಖಲಿಸಲು ಮುಂದೆ ಬಂದರಲಿಲ್ಲ. ಬಹುತೇಕ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿಲ್ಲ. ಇದು ಭಯಾನಕ ಸಂಗತಿ ಎಂದು ಆಯೋಗ ಹೇಳಿದೆ.

ಮಕ್ಕಳ ಮಾನಸಿಕ ತಜ್ಞರೂ ಆಗಿರುವ ಸ್ವತಂತ್ರ ತನಿಖಾ ಆಯೋಗದ ಅಧ್ಯಕ್ಷ ಪೆಡ್ರೊ ಸ್ಟ್ರೆಚ್ಟ್‌ ಅವರು, ಮಕ್ಕಳ ಮೇಲಿನ ಲೈಂಗಿಕ ಶೋಷಣೆ ನಿರ್ಲಕ್ಷಿಸುವ ಆಘಾತವು ಪೂರ್ಚುಗಲ್‌ಗೆ ಈಗ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆಯೂ ಕೇವಲ ಪೋರ್ಚುಗಲ್‌ಗೆ ಸಿಮೀತವಾಗಿಲ್ಲ. ಇದು ಕ್ಯಾಥೋಲಿಕ್ ಚರ್ಚ್‌ಗಳ ಪ್ರಭಾವ ಜಾಸ್ತಿ ಇರುವ ಜಗತ್ತಿನ ಇನ್ನೂ ಅನೇಕ ರಾಷ್ಟ್ರಗಳಲ್ಲಿ ಹೆಚ್ಚಾಗಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

ಸ್ವತಂತ್ರ ತನಿಖಾ ಆಯೋಗ ನೀಡಿರುವ ಈ ವರದಿಯನ್ನು ನಿಭಾಯಿಸುವುದರಲ್ಲಿ ಜಗತ್ತಿನ ಎಲ್ಲ ಕ್ಯಾಥೋಲಿಕ್ ಚರ್ಚ್‌ಗಳ ಮುಖ್ಯ ಪಾದ್ರಿಯಾಗಿರುವ ಪೋಪ್ ಫ್ರಾನ್ಸಿಸ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT