ಲಂಡನ್: ಬ್ರಿಟನ್ ರಾಜಕುಮಾರ ಹ್ಯಾರಿ ಹಾಗೂ ಅವರ ಪತ್ನಿ ಮೇಘನ್ ಮರ್ಕೆಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಕೆನ್ಸಿಂಗ್ಟನ್ ಅರಮನೆ ಅಧಿಕಾರಿಗಳು ಸೋಮವಾರ ಘೋಷಣೆ ಮಾಡಿದ್ದಾರೆ.

37 ವರ್ಷದ ಮಾಜಿ ನಟಿ ಮೇಘನ್ ಹಾಗೂ 34ರ ಹರೆಯದ ರಾಜಕುಮಾರ ಹ್ಯಾರಿ ಅವರ ವಿವಾಹವು ಮೇ ತಿಂಗಳಲ್ಲಿ ನಡೆದಿತ್ತು. 2019ರ ಮೊದಲ ಆರು ತಿಂಗಳಲ್ಲಿ ಅವರಿಗೆ ಮಗು ಜನಿಸುವ ಸಾಧ್ಯತೆ ಇದೆ ಎಂದು ಕೆನ್ಸಿಂಗ್ಟನ್ ಅರಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

‘ಮದುವೆ ನಂತರದ ದಿನಗಳಲ್ಲಿ ಜನರಿಂದ ಸಿಕ್ಕ ಬೆಂಬಲದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿರುವ ರಾಜದಂಪತಿ, ತಮಗೆ ಮಗು ಜನಿಸುವ ಸುದ್ದಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತದೆ’ ಎಂದಿದ್ದಾರೆ.

ವಿಂಡ್ಸರ್ ಕ್ಯಾಸ್ಟೆಲ್‌ನಲ್ಲಿ ಶುಕ್ರವಾರ ನಡೆದ ಎಲಿಜಬೆತ್ ಮೊಮ್ಮಗಳು ರಾಣಿ ಇಜುನಿ ಅವರ ನಿಶ್ಚಿತಾರ್ಥದ ವೇಳೆ ಮೇಘನ್ ಮರ್ಕೆಲ್ ಗರ್ಭಿಣಿಯಾಗಿರುವ ವಿಷಯ ಗೊತ್ತಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.