ಕೀವ್ : ರಷ್ಯಾದ ನೈರುತ್ಯ ಕುರ್ಸ್ಕ್ ಪ್ರದೇಶದಲ್ಲಿನ ಉಕ್ರೇನ್ ಆಕ್ರಮಣವು ‘ದೊಡ್ಡ–ಪ್ರಮಾಣದ ಪ್ರಚೋದನೆ’ಯಾಗಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಣ್ಣಿಸಿದ್ದಾರೆ.
ಉಕ್ರೇನ್ ದಾಳಿ ಬೆನ್ನಲ್ಲೇ, ಪುಟಿನ್ ಅವರು ಹಿರಿಯ ರಕ್ಷಣಾ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಚರ್ಚಿಸಿದರು.
ಶೆಲ್ ದಾಳಿಗೆ ಒಳಗಾದ ಪ್ರದೇಶದಿಂದ 200ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ಸಾವಿರಕ್ಕೂ ಹೆಚ್ಚು ಜನರು ತಮ್ಮ ಸ್ವಂತ ವಾಹನಗಳಲ್ಲಿ ತೆರಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.