ಲಂಡನ್ (ಪಿಟಿಐ): ಎರಡೂ ದೇಶಗಳಿಗೆ ಲಾಭದಾಯಕವಾದ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಅಂತಿಮಗೊಳಿಸಲು ಸಿದ್ದವಿರುವುದಾಗಿ ಬ್ರಿಟನ್‌ನ ನೂತನ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದಾರೆ ಎಂದು ಬ್ರಿಟನ್ ಪ್ರಧಾನಿಯ ವಕ್ತಾರರು ಹೇಳಿದ್ದಾರೆ.

ಎಫ್‌ಟಿಎ ಒಪ್ಪಂದಕ್ಕೆ ಅಂತಿಮ ರೂಪ ನೀಡಲು ಭಾರತ ಮತ್ತು ಬ್ರಿಟನ್ ಕಳೆದ ಎರಡು ವರ್ಷಗಳಿಂದ ಮಾತುಕತೆ ನಡೆಸುತ್ತಿವೆ. ಆದರೆ ಎರಡೂ ದೇಶಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ಮಾತುಕತೆಯು 14ನೇ ಸುತ್ತಿನ ಬಳಿಕ ಸ್ಥಗಿತಗೊಂಡಿತ್ತು.

ಸ್ಟಾರ್ಮರ್ ಅವರು ಶನಿವಾರ ಬೆಳಿಗ್ಗೆ ಮೋದಿ ಜತೆ ಮಾತುಕತೆ ನಡೆಸಿದ ವೇಳೆ ಈ ಭರವಸೆ ನೀಡಿದ್ದಾರೆ.

‘ಮಾತುಕತೆ ಸಂದರ್ಭ ಎಫ್‌ಟಿಎ ಬಗ್ಗೆಯೂ ಚರ್ಚೆ ನಡೆಯಿತು. ಒಪ್ಪಂದಕ್ಕೆ ಶೀಘ್ರದಲ್ಲೇ ಅಂತಿಮ ರೂಪ ನೀಡಲು ಸಿದ್ಧ ಎಂದು ಸ್ಟಾರ್ಮರ್ ಹೇಳಿದರು. ಈ ಸಂಬಂಧ ಮುಂದಿನ ಸುತ್ತಿನ ಮಾತುಕತೆ ಬೇಗನೇ ನಡೆಸುವ ವಿಶ್ವಾಸವನ್ನು ಉಭಯ ನಾಯಕರು ವ್ಯಕ್ತಪಡಿಸಿದರು’ ಎಂದು ವಕ್ತಾರರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.