ಕಠ್ಮಂಡು: ಲಿಪುಲೇಶ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಒಳಗೊಂಡ ರಾಜಕೀಯ ಮತ್ತು ಆಡಳಿತಾತ್ಮಕ ಪರಿಷ್ಕೃತ ನಕಾಶೆಯನ್ನು ಬಿಡುಗಡೆ ಮಾಡಿ ವಿವಾದ ಸೃಷ್ಟಿಸಿದ್ದನೇಪಾಳ ಇದೀಗ ರಾಮ ಜನ್ಮಭೂಮಿ ಅಯೋಧ್ಯೆ ಇರುವುದು ನೇಪಾಳದಲ್ಲಿ ಎಂದು ಹೇಳಿದೆ.

ಅಯೋಧ್ಯೆ ಇರುವುದು ನೇಪಾಳದಲ್ಲಿ. ರಾಮ ನೇಪಾಳಿ ಎಂದು ನೇಪಾಳದ ಪ್ರಧಾನಿ ಕೆ.ಪಿ ಶರ್ಮಒಲಿ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ನಿಜವಾದ ಅಯೋಧ್ಯೆ ಇರುವುದು ಬಿರ್‌ಗುಂಜ್‌ನ ಪಶ್ಚಿಮ ಭಾಗದಲ್ಲಿರುನ ಥೋರಿ ನಗರದಲ್ಲಿ.ರಾಮ ಭಾರತದಲ್ಲಿ ಹುಟ್ಟಿದ್ದು ಎಂದು ಭಾರತ ಹೇಳುತ್ತಲೇ ಇದ್ದುದರಿಂದ ಸೀತಾದೇವಿ ಭಾರತದ ರಾಜಕುಮಾರ ರಾಮನನ್ನು ವಿವಾಹವಾಗಿದ್ದಳು ಎಂದು ನಾವು ನಂಬಿದ್ದೆವು.ವಾಸ್ತವ ಏನೆಂದರೆ ಅಯೋಧ್ಯೆ ಎಂಬ ಗ್ರಾಮ ಬಿರ್‌ಗುಂಜ್‌ನಲ್ಲಿದೆ ಎಂದು ಪ್ರಧಾನಿ ಒಲಿ ಸೋಮವಾರ ತಮ್ಮ ನಿವಾಸದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಭೂಪಟ ಮಾರ್ಪಡಿಸುವ ಮಸೂದೆಗೆ ನೇಪಾಳ ಅಸ್ತು

ನಕಲಿ ಅಯೋಧ್ಯೆಯೊಂದನ್ನು ಸೃಷ್ಟಿಸಿ ಭಾರತ ಸಾಂಸ್ಕೃತಿಕ ಅತಿಕ್ರಮಣ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಬಾಲ್ಮೀಕಿ ಆಶ್ರಮ ನೇಪಾಳದಲ್ಲಿದಲ್ಲಿದೆ.ರಾಜ ದಶರಥ ಪುತ್ರನನ್ನು ಪಡೆಯಲು ಧಾರ್ಮಿಕ ವಿಧಿಗಳನ್ನು ನೆರವೇರಿಸಿದ್ದುರಿಧಿಯಲ್ಲಿ.ದಶರಥನ ಮಗ ರಾಮ ಭಾರತೀಯನಲ್ಲ, ಅಯೋಧ್ಯೆ ಇರುವುದು ನೇಪಾಳದಲ್ಲಿ ಎಂದಿದ್ದಾರೆ.

ಆದಾಗ್ಯೂ, ಯಾವುದೇ ಸಂಪರ್ಕ ವ್ಯವಸ್ಥೆ ಇಲ್ಲದೇ ಇರುವಾಗ ರಾಮ ಸೀತೆಯನ್ನು ಮದುವೆಯಾಗಲು ಜನಕಪುರ್‌ಗೆ ಹೇಗೆ ಬಂದ? ಇದೀಗ ಭಾರತದಲ್ಲಿರುವ ಅಯೋಧ್ಯೆಯಿಂದ ರಾಮ ಜನಕ್‌ಪುರ್‌ಗೆ ಬರುವುದು ಅಸಾಧ್ಯ. ಜನಕ್‌ಪುರ್ ಇರುವುದು ಇಲ್ಲಿ ಮತ್ತು ಅಯೋಧ್ಯೆ ಇರುವುದು ಅಲ್ಲಿ. ಟೆಲಿಫೋನ್ ಅಥವಾ ಮೊಬೈಲ್ ಇಲ್ಲದ ಸಮಯದಲ್ಲಿ ವಿವಾಹ ಮಾತುಕತೆ ನಡೆಯುತ್ತದೆ. ರಾಮನಿಗೆ ಜನಕ್‌ಪುರ್ ಬಗ್ಗೆ ಹೇಗೆ ಗೊತ್ತು? ಎಂದು ನೇಪಾಳದ ಪ್ರಧಾನಿಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ನೇಪಾಳ: ಒಲಿ ಭವಿಷ್ಯ ನಿರ್ಧರಿಸುವ ಸಭೆ ಮತ್ತೆ ಮುಂದಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.