ವಾಷಿಂಗ್ಟನ್: ಉಕ್ರೇನ್–ರಷ್ಯಾ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸೋಮವಾರ ಶ್ವೇತಭವನದಲ್ಲಿ ಮಹತ್ವದ ಸಭೆ ನಡೆಸಿದರು.

ಈ ವೇಳೆ ವರದಿಗಾರ ಬ್ರಿಯಾನ್ ಗ್ಲೆನ್, ಝೆಲೆನ್ಸ್ಕಿ ಅವರ ಉಡುಪಿನ ಬಗ್ಗೆ ಮಾತನಾಡಿದ್ದಾರೆ. ‘ಈ ಬಟ್ಟೆಯಲ್ಲಿ ನೀವು ಅದ್ಘುತವಾಗಿ ಕಾಣಿಸುತ್ತಿದ್ದೀರಿ’ ಎಂದಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ ಓವಲ್ ಆಫೀಸ್ನಲ್ಲಿ ನಡೆದ ಸಭೆಯಲ್ಲಿ ಇದೇ ವರದಿಗಾರ, ಸೇನಾ ಸಮವಸ್ತ್ರ ಧರಿಸಿ ಬಂದಿದ್ದಕ್ಕೆ ಝಲೆನ್ಸ್ಕಿ ಅವರನ್ನು ಟೀಕಿಸಿದ್ದರು. ಮಹತ್ವದ ಸ್ಥಾನದಲ್ಲಿರುವ ನೀವು ಸೂಟ್ ಧರಿಸಬಾರದೇಕೆ ಎಂದು ಪ್ರಶ್ನಿಸಿದ್ದರು. ಅಲ್ಲದೇ ನೀವು ಈ ಕಚೇರಿಯ ಘನತೆಯನ್ನು ಗೌರವಿಸುತ್ತಿಲ್ಲ ಎಂದು ಹೇಳಿದ್ದರು.

ನಿನ್ನೆ ನಡೆದ ಸಭೆಯಲ್ಲಿ ಕಪ್ಪು ಬಣ್ಣದ ಶರ್ಟ್ ಮತ್ತು ಜಾಕೆಟ್ನಲ್ಲಿ ಝೆಲೆನ್ಸ್ಕಿ ಕಾಣಿಸಿಕೊಂಡಿದ್ದರು. ಇದನ್ನು ತಕ್ಷಣ ಗಮನಿಸಿದ ವರದಿಗಾರ ಗ್ಲೆನ್, ‘ನೀವು ಈ ಬಟ್ಟೆಯಲ್ಲಿ ಚೆನ್ನಾಗಿ ಕಾಣುತ್ತಿದ್ದೀರಿ’ ಎಂದು ಪ್ರಶಂಸಿಸಿದ್ದಾರೆ.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಟ್ರಂಪ್, ‘ನಾನೂ ಅದನ್ನೇ ಹೇಳಿದೆ’ ಎಂದು ಗ್ಲೆನ್ ಮಾತಿಗೆ ಸಹಮತ ಸೂಚಿಸಿದ್ದಾರೆ.

ಝಲೆನ್ಸ್ಕಿ ಅವರ ಕಡೆಗೆ ತಿರುಗಿ, ‘ಕಳೆದ ಬಾರಿ ನಿಮ್ಮ ಉಡುಪನ್ನು ಟೀಸಿದವರು ಅವರೇ’ ಎಂದು ಟ್ರಂಪ್ ಹೇಳಿದ್ದಾರೆ. ಈ ಮಾತಿಗೆ ಕೋಣೆಯಲ್ಲಿದ್ದರು ನಗೆ ಬೀರಿದ್ದಾರೆ.

‘ನನಗೆ ಅದು ನೆನಪಿದೆ’ ಎಂದು ಝಲೆನ್ಸ್ಕಿ ಟ್ರಂಪ್ಗೆ ಪ್ರತಿಕ್ರಿಯಿಸಿದ್ದಾರೆ.

ಮುಂದುವರಿದು, ‘ನೀವು(ಗ್ಲೆನ್) ಮಾತ್ರ ಅದೇ ಸೂಟ್ ಧರಿಸಿದ್ದೀರಿ’ ಎಂದು ವರದಿಗಾರನ ಕಾಲೆಳೆದಿದ್ದಾರೆ.

ಉಕ್ರೇನ್ನಲ್ಲಿ ಶಾಂತಿ ಸಾಧಿಸುವವರೆಗೆ ಸೇನಾ ಸಮವಸ್ತ್ರವನ್ನು ಧರಿಸುವುದಾಗಿ ಈ ಹಿಂದೆ ಝೆಲೆನ್ಸ್ಕಿ ಹೇಳಿದ್ದರು.

ಯುದ್ಧವನ್ನು ಅಂತ್ಯಗೊಳಿಸುವ ಸಲುವಾಗಿ ಟ್ರಂಪ್ ಮತ್ತು ಪುಟಿನ್ ನಡುವೆ ಅಲಾಸ್ಕದಲ್ಲಿ ಭಾನುವಾರ ಸಭೆ ನಡೆದಿತ್ತು. ಅದರ ಬೆನ್ನಲ್ಲೇ ಟ್ರಂಪ್ ಅವರು ಝೆಲೆನ್ಸ್ಕಿ ಜತೆ ತರಾತುರಿಯಲ್ಲಿ ಸಭೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.