ಲಂಡನ್: ಬ್ರಿಟನ್ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಗೋಲ್ಡ್ಮನ್ ಸ್ಯಾಚ್ಸ್ ಗ್ರೂಪ್ ಬ್ಯಾಂಕ್ನಲ್ಲಿ ಹಿರಿಯ ಸಲಹೆಗಾರರಾಗಿ ಸೇರಿದ್ದಾರೆ.

ವರದಿಗಳ ಪ್ರಕಾರ, ಸುನಕ್ ಅವರು ತಮ್ಮ ಸಂಭಾವನೆಯನ್ನು ಇತ್ತೀಚೆಗೆ ಪತ್ನಿ ಅಕ್ಷತಾರೊಂದಿಗೆ ಸ್ಥಾಪಿಸಿದ ದತ್ತಿನಿಧಿ ಯೋಜನೆ ‘ರಿಚ್ಮಂಡ್ ಪ್ರಾಜೆಕ್ಟ್’ಗೆ ನೀಡುವ ಯೋಚನೆ ಹೊಂದಿದ್ದಾರೆ ಎಂದು ವರದಿಯಾಗಿದೆ.

ಈ ಗೋಲ್ಡ್ಮನ್ ಸ್ಯಾಚ್ಸ್ ಗ್ರೂಪ್ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಆಗಿದ್ದು, ಪ್ರಧಾನ ಕಚೇರಿ ಅಮೆರಿಕದಲ್ಲೇ ಇದೆ. ಸುನಕ್ ಅವರು ರಾಜಕೀಯಕ್ಕೆ ಬರುವ ಮೊದಲು ಇದೇ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದರು.

ನಾರಾಯಣ ಮೂರ್ತಿ ಅವರ 70 ಗಂಟೆಗಳ ಕೆಲಸಕ್ಕೆ ಹೋಲಿಕೆ

ಸುನಕ್ ಅವರು ಬ್ಯಾಂಕ್ ಉದ್ಯೋಗಿಯಾಗಿ ಸೇರಿಕೊಂಡಿದ್ದಾರೆ ಎನ್ನುವ ವಿಚಾರ ಹೊರಬೀಳುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ಇನ್ಫಿ ನಾರಾಯಣ ಮೂರ್ತಿಯವರು ‘ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು’ ಎಂದಿದ್ದ ಹೇಳಿಕೆಯೊಂದಿಗೆ ಮೀಮ್ಸ್ಗಳು ಹರಿದಾಡುತ್ತಿವೆ.

ಎಕ್ಸ್ ಬಳಕೆದಾರರೊಬ್ಬರು ‘ವಾರಕ್ಕೆ 70 ಗಂಟೆ ಕೆಲಸ ಮಾಡುವ ಕೋಟಾವನ್ನು ಪೂರ್ಣಗೊಳಿಸಲು ಸುನಕ್ ಅವರು ಗೋಲ್ಡ್ಮನ್ ಸ್ಯಾಚ್ಸ್ಗೆ ಸೇರಿಕೊಂಡಿದ್ದಾರೆ’ ಎಂದಿದ್ದಾರೆ.

ಇನ್ನೊಬ್ಬ ಬಳಕೆದಾರ, ಕೆಲಸದಿಂದ ಬಳಲಿದ ವ್ಯಕ್ತಿಯಂತಿರುವ ಸಿನಿಮಾ ಪಾತ್ರದ ಫೋಟೊ ಹಂಚಿಕೊಂಡು ‘ಗೋಲ್ಡ್ಮನ್ ಸ್ಯಾಚ್ಸ್ನಲ್ಲಿ ರಿಷಿ ಸುನಕ್ ಮೊದಲ ದಿನ’ ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬ, ‘ಸುನಕ್ ಅವರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಿ, ಮಾವನ ಆಸೆಯನ್ನು ಪೂರೈಸಲಿದ್ದಾರೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.