ರಷ್ಯಾದ ಸರ್ಕಾರಿ ಟಿ.ವಿ ವಾಹಿನಿ ಬುಧವಾರ ಪ್ರಸಾರ ಮಾಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪುಟಿನ್, ಅಣ್ವಸ್ತ್ರ ಯುದ್ಧವನ್ನು ಪ್ರಚೋದಿಸುವಂತಹ ಯಾವುದೇ ಬೆಳವಣಿಗೆಯನ್ನು ಅಮೆರಿಕ ತಪ್ಪಿಸುವ ವಿಶ್ವಾಸವಿದೆ. ಆದರೆ, ರಷ್ಯಾದ ಅಣ್ವಸ್ತ್ರ ಪಡೆಗಳು ಅಂತಹ ಸನ್ನಿವೇಶ ಎದುರಾದರೆ ಅಣ್ವಸ್ತ್ರ ಪ್ರಯೋಗಿಸಲು ಸಜ್ಜಾಗಿವೆ. ರಷ್ಯಾದ ಬಳಿ ಅತ್ಯಾಧುನಿಕ ಪರಮಾಣು ಶಸ್ತ್ರಾಸ್ತ್ರಗಳು ಇವೆ. ನಮ್ಮ ಬಳಿ ಇರುವ ಅಣ್ವಸ್ತ್ರಗಳು ಅಮೆರಿಕ ಹೊಂದಿರುವ ಅಣ್ವಸ್ತ್ರಗಳಿಗಿಂತಲೂ ಹೆಚ್ಚು ಅತ್ಯಾಧುನಿಕವಾಗಿವೆ ಎಂದು ಹೇಳಿದ್ದಾರೆ.