ಮಾಸ್ಕೊ/ಕೀವ್: ರಷ್ಯಾದ ಮೇಲೆ 90 ಡ್ರೋನ್ಗಳ ಮೂಲಕ ಉಕ್ರೇನ್ ದಾಳಿ ನಡೆಸಿದೆ. ಜೊತೆಗೆ, ಹಡಗು ವಿನಾಶಕ ಕ್ರೂಸ್ ಕ್ಷಿಪಣಿ ‘ನೆಪ್ಚೂನ್’ ಮೂಲಕವೂ ದಾಳಿ ನಡೆಸಿದೆ. ‘ಉಕ್ರೇನ್ ಸಿಡಿಸಿದ ಎಲ್ಲ ಡ್ರೋನ್ಗಳನ್ನು ಹಾಗೂ ಕ್ಷಿಪಣಿಯೊಂದನ್ನು ನಾಶಪಡಿಸಲಾಗಿದೆ’ ಎಂದು ರಷ್ಯಾ ಹೇಳಿದೆ. ಉಕ್ರೇನ್ನ ದಾಳಿಗೆ ಪ್ರತಿಯಾಗಿ ರಷ್ಯಾ ಕೂಡ 147 ಡ್ರೋನ್ಗಳ ಮೂಲಕ ದಾಳಿ ನಡೆಸಿದೆ.

‘ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸುವುದಕ್ಕಾಗಿ ತುರ್ತು ಮಾತುಕತೆ ನಡೆಸಲು ಸಿದ್ಧವಾಗಿದ್ದೇವೆ’ ಎಂದು ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಉಕ್ರೇನ್ ಈ ದಾಳಿ ನಡೆಸಿದೆ.

‘ರಾತ್ರಿ ವೇಳೆಯಲ್ಲಿ ಡ್ರೋನ್ ದಾಳಿ ನಡೆಸಲಾಗಿದೆ. ನಮ್ಮ ರಕ್ಷಣಾತ್ಮಕ ವ್ಯವಸ್ಥೆಯು ಉಕ್ರೇನ್ನ ಡ್ರೋನ್ಗಳನ್ನು ಹೊಡೆದುರುಳಿಸಿವೆ. ಸಾವು–ನೋವಿನ ಯಾವುದೇ ಘಟನೆ ಸಂಭವಿಸಿಲ್ಲ’ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ.

ರಷ್ಯಾ ನಡೆಸಿದ ದಾಳಿಯ ಪರಿಣಾಮವಾಗಿ ಉಕ್ರೇನ್ನ ಕೀವ್ ಪ್ರಾಂತ್ಯದ ಕಾರ್ಖಾನೆಯೊಂದಕ್ಕೆ ಬೆಂಕಿ ತಗುಲಿದೆ. ನಾಲ್ಕು ಖಾಸಗಿ ವಸತಿ ನಿಲಯಗಳಿಗೆ ಹಾನಿಯಾಗಿದೆ. ವ್ಯಕ್ತಿಯೊಬ್ಬರಿಗೆ ಗಾಯಗಳಾಗಿವೆ. ಜೊತೆಗೆ, ಕಾರ್ಕೀವ್ ಪ್ರಾಂತ್ಯದಲ್ಲಿ ಮೂರು ಅಂತಸ್ತಿನ ಕಟ್ಟಡಕ್ಕೆ ಹಾನಿಯಾಗಿದೆ. ಸರ್ಕಾರದ ಆಡಳಿತ ಕಚೇರಿ ಮತ್ತು 14 ನಿವಾಸಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿದೆ’ ಎಂದು ಉಕ್ರೇನ್ ಮಾಹಿತಿ ನೀಡಿದೆ.

‘ರಷ್ಯಾದ 147 ಡ್ರೋನ್ಗಳ ಪೈಕಿ 83 ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ. ಗುರಿ ತಲುಪದಂತೆ ಸುಮಾರು 59 ಡ್ರೋನ್ಗಳನ್ನು ತಡೆಯಲಾಗಿದೆ’ ಎಂದು ಉಕ್ರೇನ್ ಸೇನೆ ಹೇಳಿದೆ. ಆದರೆ, ಉಳಿದ 5 ಡ್ರೋನ್ಗಳು ಏನಾದವು ಎನ್ನುವ ಬಗ್ಗೆ ಉಕ್ರೇನ್ ಮಾಹಿತಿ ನೀಡಿಲ್ಲ.

‘ಉಕ್ರೇನ್ಗೆ ಶಾಂತಿಪಾಲನಾ ಪಡೆ ಕಳುಹಿಸಲು ಸಿದ್ಧ’

‘ಉಕ್ರೇನ್–ರಷ್ಯಾ ಯುದ್ಧ ಅಂತ್ಯಗೊಂಡ ಬಳಿಕ ಉಕ್ರೇನ್ಗೆ ಬ್ರಿಟನ್ನ ಶಾಂತಿಪಾಲನಾ ಪಡೆಯನ್ನು ಕಳುಹಿಸಲು ನಾವು ಸಿದ್ಧವಾಗಿದ್ದೇವೆ’ ಎಂದು ಬ್ರಿಟನ್ ಪ್ರಧಾನಿ ಕೀರ್ ಸ್ಟಾಮರ್ ಅವರು ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಹೇಳಿದ್ದಾರೆ. ಆ ಮೂಲಕ ಅಮೆರಿಕದೊಂದಿಗೆ ಯುರೋಪ್ ಕೂಡ ಯುದ್ಧ ಅಂತ್ಯಗೊಳಿಸುವಲ್ಲಿ ಮುಖ್ಯ ಭೂಮಿಕೆ ವಹಿಸುವ ಆಸಕ್ತಿ ತೋರಿದೆ ಎನ್ನುವ ಸಂದೇಶ ರವಾನಿಸಿದ್ದಾರೆ. ಆದರೆ ಇದಕ್ಕೆ ರಷ್ಯಾದ ಸಹಮತವಿಲ್ಲ.

‘ಯುದ್ಧ ಅಂತ್ಯಗೊಳಿಸಲು ಯುರೋಪ್ನವರಿಗೆ ಸಾಕಷ್ಟು ಸಮಯಾವಕಾಶವಿತ್ತು. ಅವರಿಗೆ ಯುದ್ಧ ನಿಲ್ಲುವುದು ಬೇಡ’ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕ ಹಾಗೂ ರಷ್ಯಾದ ಅಧಿಕಾರಿಗಳು ಯುದ್ಧ ಅಂತ್ಯಗೊಳಿಸುವ ಸಂಬಂಧ ಸೌದಿ ಅರೇಬಿಯಾದಲ್ಲಿ ಮಂಗಳವಾರ ಸಭೆ ಸೇರಲಿದ್ದಾರೆ. ಉಕ್ರೇನ್ ಪ್ರಧಾನಿ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಮಂಗಳವಾರ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲಿದ್ದಾರೆ. ಆದರೆ ಅಮೆರಿಕ ಮತ್ತು ರಷ್ಯಾದ ಮಾತುಕತೆಯಲ್ಲಿ ಭಾವಹಿಸುವುದಿಲ್ಲ ಎಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.