ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಮಾರ್ಸ್‌ ಕ್ಷಿಪಣಿ ದಾಳಿ: ಉಕ್ರೇನಿನ 53 ಯುದ್ಧ ಕೈದಿಗಳು ಸಾವು

Published : 29 ಜುಲೈ 2022, 14:26 IST
ಫಾಲೋ ಮಾಡಿ
Comments

ಕೀವ್‌: ರಷ್ಯಾ ಬೆಂಬಲಿತಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪೂರ್ವ ಪ್ರಾಂತ್ಯ ಡೊನೆಟ್‌ಸ್ಕ್ ಮೇಲೆ ಉಕ್ರೇನ್ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು, ಇದರಲ್ಲಿ ಮರಿಯುಪೋಲ್‌ನ ಅಜೋವ್‌ಸ್ಟಾಲ್‌ ಉಕ್ಕಿಸ್ಥಾವರದಲ್ಲಿ ರಷ್ಯಾ ಪಡೆಗಳು ಬಂಧಿಸಿದ್ದ 53 ಮಂದಿ ಉಕ್ರೇನ್ ಯುದ್ಧ ಕೈದಿಗಳು ಹತರಾಗಿದ್ದಾರೆ.

ಆದರೆ, ಉಕ್ರೇನ್‌ ಸೇನೆಯು ‘ಇದು ರಷ್ಯಾ ಸೇನೆ ನಡೆಸಿರುವ ಶೆಲ್‌ ದಾಳಿ. ಯುದ್ಧ ಕೈದಿಗಳಿಗೆ ನೀಡಿರುವ ಚಿತ್ರಹಿಂಸೆಯ ಸಾಕ್ಷ್ಯಗಳನ್ನು ನಾಶಪಡಿಸಲು ದಾಳಿ ನಡೆಸಲಾಗಿದೆ’ ಎಂದು ಆರೋಪಿಸಿದೆ.

ಒಲೆನಿವ್ಕಾದಲ್ಲಿ ಯುದ್ಧ ಕೈದಿಗಳನ್ನು ಇರಿಸಲಾಗಿದ್ದ ಕಾರಾಗೃಹದ ಮೇಲೆ ಹಿಮಾರ್ಸ್‌ ಬಹು ಕ್ಷಿಪಣಿಗಳ ದಾಳಿಯಾಗಿದೆ. ಸುಮಾರು 130 ಮಂದಿ ಉಕ್ರೇನ್‌ ಯುದ್ಧ ಕೈದಿಗಳು ಗಾಯಗೊಂಡಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್‌ ಜನರಲ್‌ ಐಗೋರ್‌ ಕೊನಶೆಂಕೊವ್‌ ಶುಕ್ರವಾರ ತಿಳಿಸಿದ್ದಾರೆ.

‘ಇದೊಂದು ಮೂರ್ಖತನದ ಪ್ರಚೋದನೆ. ಉಕ್ರೇನ್‌ ಸೈನಿಕರ ಶರಣಾಗತಿಗೆ ತಣ್ಣೀರೆರೆಚುವ ಉದ್ದೇಶ ಈ ದಾಳಿಯ ಹಿಂದಿದೆ. ಶೆಲ್‌ ದಾಳಿಯಲ್ಲಿ ಬಂದೀಖಾನೆಯ ಎಂಟು ಸಿಬ್ಬಂದಿಯೂ ಗಾಯಗೊಂಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT