ಮಾಸ್ಕೊ: ಉಕ್ರೇನ್ ಗಡಿಯಲ್ಲಿರುವ ರಷ್ಯಾದ ಬ್ರಿಯಾನ್ಸ್ಕ್ ಪ್ರಾಂತ್ಯದಲ್ಲಿ ನಡೆದ ದಾಳಿಯಿಂದ ಸೇತುವೆ ಕುಸಿದ ಪರಿಣಾಮ ರೈಲು ಹಳಿ ತಪ್ಪಿದೆ. ಈ ವೇಳೆ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾದ ಅಧಿಕಾರಿಗಳು ಇಂದು (ಭಾನುವಾರ) ಬೆಳಿಗ್ಗೆ ತಿಳಿಸಿದ್ದಾರೆ.

'ಸಾರಿಗೆ ಕಾರ್ಯಾಚರಣೆ ಮೇಲಿನ ಅಕ್ರಮ ದಾಳಿಯ ಪರಿಣಾಮವಾಗಿ ಸೇತುವೆ ಕುಸಿದಿದೆ. ಇದರಿಂದಾಗಿ, ರೈಲಿನ ಎಂಜಿನ್ ಹಾಗೂ ಹಲವು ಬೋಗಿಗಳು ಹಳಿ ತಪ್ಪಿವೆ' ಎಂದು ರಷ್ಯಾ ರೈಲ್ವೆ ಇಲಾಖೆಯು ಟೆಲಿಗ್ರಾಮ್ನಲ್ಲಿ ಸಂದೇಶ ಹಂಚಿಕೊಂಡಿದೆ.

ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳಲ್ಲಿ ಇಬ್ಬರು ಮಕ್ಕಳಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಬ್ರಿಯಾನ್ಸ್ಕ್ ಗವರ್ನರ್ ಅಲೆಕ್ಸಾಂಡರ್ ಬೊಗೊಮಾಜ್ ತಿಳಿಸಿದ್ದಾರೆ.

ದುರಂತಕ್ಕೀಡಾದ ರೈಲು ಕ್ಲಿಮೊವೊ ಪಟ್ಟಣದಿಂದ ಮಾಸ್ಕೊಗೆ ಸಂಚರಿಸುತ್ತಿತ್ತು ಎಂಬುದಾಗಿ ರೈಲ್ವೆ ಇಲಾಖೆ ತಿಳಿಸಿದೆ. ಬ್ರಿಯಾನ್ಸ್ಕ್ ಪ್ಯಾಂತ್ಯದ ವಿಗೊನಿಚ್ಸ್ಕಿ ಜಿಲ್ಲೆಯ ಫೆಡರಲ್ ಹೆದ್ದಾರಿ ಪ್ರದೇಶದಲ್ಲಿ ಹಳಿ ಮೇಲೆ ಕುಸಿದಿದ್ದ ಸೇತುವೆಗೆ ರೈಲು ಡಿಕ್ಕಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಿಗೊನಿಚ್ಸ್ಕಿ ಜಿಲ್ಲೆಯು ಉಕ್ರೇನ್ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿದೆ.

ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, 180 ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ತುರ್ತು ಸೇವೆಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಉಕ್ರೇನ್ನಲ್ಲಿ ರಷ್ಯಾ ಸೇನಾ ಕಾರ್ಯಾಚರಣೆ ಆರಂಭವಾದಾಗಿನಿಂದಲೂ, ಗಡಿ ಭಾಗದಲ್ಲಿರುವ ಬ್ರಿಯಾನ್ಸ್ಕ್, ಕುರ್ಸ್ಕ್ ಹಾಗೂ ಬೆಲ್ಗೊರಾಡ್ ಪ್ರಾಂತ್ಯಗಳ ಮೇಲೆ ಉಕ್ರೇನ್ ಶೆಲ್, ಡ್ರೋನ್ ದಾಳಿ ಮುಂದುವರಿಸಿದೆ.

ರೈಲು ದುರಂತಕ್ಕೆ ಸಂಬಂಧಿಸಿದಂತೆ ಉಕ್ರೇನ್ನಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಕದನ ವಿರಾಮ ಘೋಷಣೆಗೆ ಒತ್ತಾಯ
ಸಂಘರ್ಷ ನಿಲ್ಲಿಸಿ ಕದನ ವಿರಾಮ ಘೋಷಿಸುವಂತೆ ರಷ್ಯಾ ಹಾಗೂ ಉಕ್ರೇನ್ಗೆ ಜಾಗತಿಕ ಸಮುದಾಯ ಕರೆ ನೀಡಿದೆ. ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ. ಮುಂದಿನ ವಾರ ಟರ್ಕಿಯ ಇಸ್ತಾಂಬುಲ್ನಲ್ಲಿ ಉಕ್ರೇನ್ ಜೊತೆ ಎರಡನೇ ಸುತ್ತಿನ ಮಾತುಕತೆ ನಡೆಸುವ ವಿಚಾರವನ್ನು ರಷ್ಯಾ ಪ್ರಸ್ತಾಪಿಸಿದೆ.

ಆದರೆ, ಮಾತುಕತೆಯಲ್ಲಿ ಪಾಲ್ಗೊಳ್ಳುವುದು ಉಕ್ರೇನ್ ಕಡೆಯಿಂದ ಇನ್ನೂ ಖಚಿತವಾಗಿಲ್ಲ. ರಷ್ಯಾದ ಪ್ರಸ್ತಾಪಗಳು ಏನಿರಲಿವೆ ಎಂಬುದನ್ನು ಕಾದು ನೋಡುವುದಾಗಿ ಹೇಳಿದೆ. ಏತನ್ಮಧ್ಯೆ, ರಷ್ಯಾ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹೇರುವುದಾಗಿ ಅಮೆರಿಕ ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.