ಕೀವ್: ‘ಹೆರ್ಸಾನ್ ಪ್ರಾಂತ್ಯದ ಎರಡು ಹಳ್ಳಿಗಳ ಮೇಲೆ ರಷ್ಯಾ ಪಡೆಗಳು ಕ್ಷಿಪಣಿ ದಾಳಿ ನಡೆಸಿದ್ದು, ಮಗು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ’ ಎಂದು ಉಕ್ರೇನ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.
‘ದಾಳಿಯಿಂದಾಗಿ ಶೈರೊಕಾ ಬಲ್ಕಾ ಎಂಬ ಹಳ್ಳಿಯಲ್ಲಿ ದಂಪತಿ, 23 ದಿನದ ಮಗು ಮತ್ತು 12 ವರ್ಷದ ಮಗ ಹಾಗೂ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ’ ಎಂದು ಆಂತರಿಕ ಸಚಿವ ಇಹೋರ್ ಕ್ಲೈಮೆಂಕೊ ಅವರು ಹೇಳಿದ್ದಾರೆ.
‘ಸ್ಟಾನಿಸ್ಲಾವ್ ಎಂಬ ಪಕ್ಕದ ಹಳ್ಳಿಯ ಮೇಲೂ ನಡೆದ ದಾಳಿಯಲ್ಲಿ ಇಬ್ಬರು ಮೃತಪಟ್ಟು, ಒಬ್ಬರು ಗಾಯಗೊಂಡಿದ್ದಾರೆ. ಈ ಹಳ್ಳಿಯ ಮೇಲೆ 12 ಬಾರಿ ಕ್ಷಿಪಣಿ ದಾಳಿ ನಡೆಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
‘ಭಯೋತ್ಪಾದಕರು ಸಾರ್ವಜನಿಕರನ್ನು ಸಾಯಿಸುವುದನ್ನು ನಿಲ್ಲಿಸುವುದಿಲ್ಲ’ ಎಂದು ಕ್ಲೈಮೆಂಕೊ ಅವರು ತಮ್ಮ ಟೆಲಿಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದು, ಹಾನಿಗೀಡಾಗಿರುವ ಮನೆಗಳ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.