ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ ದಾಳಿ: ಗಾಜಾದ ಶೇ 35ರಷ್ಟು ಕಟ್ಟಡಗಳಿಗೆ ಹಾನಿ

Published 21 ಮಾರ್ಚ್ 2024, 13:46 IST
Last Updated 21 ಮಾರ್ಚ್ 2024, 13:46 IST
ಅಕ್ಷರ ಗಾತ್ರ

ಜಿನೀವಾ: ವಿಶ್ವಸಂಸ್ಥೆಯ ಸ್ಯಾಟಲೈಟ್‌ ಕೇಂದ್ರವು (ಯುಎನ್‌ಒಸ್ಯಾಟ್‌) ಅಧ್ಯಯನ ನಡೆಸಿದ ಸ್ಯಾಟಲೈಟ್‌ ಚಿತ್ರಗಳಲ್ಲಿ, ಇಸ್ರೇಲ್‌ ದಾಳಿಯಿಂದಾಗಿ ಗಾಜಾ ಪಟ್ಟಿಯ ಶೇ 35ರಷ್ಟು ಕಟ್ಟಡಗಳು ಪೂರ್ಣ ಅಥವಾ ಭಾಗಶಃ ಹಾನಿಗೊಂಡಿರುವುದು ಬೆಳಕಿಗೆ ಬಂದಿದೆ. 

ಯುಎನ್‌ಒಸ್ಯಾಟ್‌ ಫೆಬ್ರುವರಿ 29ರಂದು ಮತ್ತು ಯುದ್ಧ ಆರಂಭವಾಗುವ ಮೊದಲು ಸೆರೆ ಹಿಡಿದಿರುವ ಚಿತ್ರಗಳನ್ನು ತುಲನೆ ಮಾಡಿ ಅಧ್ಯಯನ ನಡೆಸಿದ್ದು, ಗಾಜಾ ಪಟ್ಟಿಯ 88,868 ಕಟ್ಟಡಗಳು ಪೂರ್ಣ ಅಥವಾ ಭಾಗಶಃ ಹಾನಿಗೊಂಡಿರುವುದು ಕಂಡುಬಂದಿದೆ. ಇದರಲ್ಲಿ 31,198 ಕಟ್ಟಡಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು, 16,908 ಕಟ್ಟಡಗಳು ಭಾಗಶಃ ಹಾನಿಯಾಗಿವೆ.

‘ಜನವರಿಯಲ್ಲಿ ಸೆರೆಹಿಡಿದಿದ್ದ ಚಿತ್ರಗಳಲ್ಲಿ ಶೇ 30ರಷ್ಟು ಕಟ್ಟಡಗಳು ಪೂರ್ಣ ಅಥವಾ ಭಾಗಶಃ ಹಾನಿಯಾಗಿರುವುದು ಕಂಡುಬಂದಿತ್ತು. ಆ ಬಳಿಕ ಸುಮಾರು 20,000 ಕಟ್ಟಡಗಳು ಪೂರ್ಣ ಅಥವಾ ಭಾಗಶಃ ಹಾನಿಗೊಂಡಿವೆ’ ಎಂದು ಯುಎನ್‌ಒಸ್ಯಾಟ್‌ ತಿಳಿಸಿದೆ.

ಖಾನ್‌ ಯುನೀಸ್‌ ಮತ್ತು ಗಾಜಾದಲ್ಲಿ ಹಾನಿಯ ಪ್ರಮಾಣ ವಿಪರೀತವಾಗಿ ಏರಿಕೆಯಾಗಿದ್ದು, ಖಾನ್‌ ಯುನೀಸ್‌ನಲ್ಲಿ 12,279 ಮತ್ತು ಗಾಜಾದಲ್ಲಿ 2,010 ಕಟ್ಟಡಗಳಿಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT