ವಾಷಿಂಗ್ಟನ್: ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಜಾರಿಗೊಳಿಸಿದ್ದ ಭಾರಿ ಪ್ರಮಾಣದ ಆಮದು ಸುಂಕ ರದ್ದುಪಡಿಸಬೇಕು’ ಎಂದು ಅಮೆರಿಕದ 12 ರಾಜ್ಯಗಳು ಫೆಡರಲ್ ಕೋರ್ಟ್ ಮೊರೆ ಹೋಗಿವೆ. ‘ಅಧಿಕಾರ ಮೀರಿ ಟ್ರಂಪ್ ತೀರ್ಮಾನ ಕೈಗೊಂಡಿದ್ದಾರೆ’ ಎಂದೂ ಪ್ರತಿಪಾದಿಸಿವೆ.

ವಿಶ್ವದ ವಿವಿಧ ರಾಷ್ಟ್ರಗಳ ಮೇಲೆ ವಿಧಿಸಲಾಗಿದ್ದ ತೀವ್ರ ಆಮದು ಸುಂಕವನ್ನು ಈ ರಾಜ್ಯಗಳು ಪ್ರಶ್ನಿಸಿದ್ದು, ಇದು ಅಮೆರಿಕದ ವ್ಯಾಪಾರ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದಿವೆ.

ಅಕ್ರಮ ವಲಸೆ ತಡೆಯಲು ಇದಕ್ಕೂ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಕೆನಡಾ, ಚೀನಾ ಮತ್ತು ಮೆಕ್ಸಿಕೊದ ಆಮದು ಉತ್ಪನ್ನಗಳ ಮೇಲೆ ವಿಧಿಸಿದ್ದ ಭಾರಿ ಸುಂಕವನ್ನೂ ಈ ರಾಜ್ಯಗಳು ಪ್ರಶ್ನಿಸಿವೆ.

ನ್ಯೂಯಾರ್ಕ್ನಲ್ಲಿ ಇರುವ ಅಂತರರಾಷ್ಟ್ರೀಯ ವಹಿವಾಟು ಕುರಿತ ಕೋರ್ಟ್ನ ಮೂವರು ನ್ಯಾಯಮೂರ್ತಿಗಳ ಪೀಠವು ಬುಧವಾರ ಈ ಕುರಿತು ರಾಜ್ಯಗಳ ವಾದವನ್ನು ಆಲಿಸಿತು. ಐದು ಸಣ್ಣ ಉದ್ಯಮ ಸಂಘಟನೆಗಳು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿಯೂ ವಾದ ಆಲಿಸಿತು.

ಹೊಸ ಸುಂಕ ನೀತಿ ಪ್ರಶ್ನಿಸಿ ಒಟ್ಟು ಏಳು ಅರ್ಜಿಗಳು ಸಲ್ಲಿಕೆಯಾಗಿವೆ. ಅರಿಜೋನಾ, ಮೈನೆ, ಕೊಲೊರಾಡೊ,ಕೊನೆಕ್ಟಿಕಟ್, ಡೆಲವೇರ್, ಇಲಿನಾಯ್ಸ್, ಮಿನೆಸೊಟಾ, ನೆವಡಾ, ನ್ಯೂ ಮೆಕ್ಸಿಕೊ, ನ್ಯೂಯಾರ್ಕ್, ಒರೆಗಾನ್, ವೆರ್ಮಾಟ್ ಈಗ ಕೋರ್ಟ್ ಮೆಟ್ಟಿಲೇರಿರುವ ರಾಜ್ಯಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.