ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿ: ಬಸ್‌ ಅಪಘಾತದಲ್ಲಿ ಹಲವು ಸಾವು

Published 27 ಮಾರ್ಚ್ 2024, 15:40 IST
Last Updated 27 ಮಾರ್ಚ್ 2024, 15:40 IST
ಅಕ್ಷರ ಗಾತ್ರ

ಬರ್ಲಿನ್‌ (ಜರ್ಮನಿ): ‘ಪೂರ್ವ ಜರ್ಮನಿಯ ಲೀಪ್‌ಜಿಂಗ್‌ನಲ್ಲಿ ಬುಧವಾರ ಬಸ್‌ ಅಪಘಾತ ಸಂಭವಿಸಿದ್ದು, ಅನೇಕ ಪ್ರಯಾಣಿಕರು ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬರ್ಲಿನ್‌ನಿಂದ ಮ್ಯೂನಿಕ್‌ಗೆ ಸಂಪರ್ಕ ಕಲ್ಪಿಸುವ ಫ್ಲಿಕ್ಸ್‌ಬಸ್‌, ಎ9 ಮೋಟರ್‌ವೇನಲ್ಲಿ ಸಾಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬಲಕ್ಕೆ ತಿರುಗಿದೆ. ಇದರಿಂದಾಗಿ ಐದು ಮಂದಿ ಮೃತಪಟ್ಟಿದ್ದಾರೆ’ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

‘ಪ್ರಸ್ತುತ, ಮ್ಯೂನಿಕ್‌ನೆಡೆ ಸಾಗುವ ಮಾರ್ಗವನ್ನು ಬಂದ್‌ ಮಾಡಲಾಗಿದೆ. ಬಸ್‌ ಬರ್ಲಿನ್‌ನಿಂದ ಜ್ಯೂರಿಕ್‌ಗೆ ಪ್ರಯಾಣಿಸುತ್ತಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಕಾರಣ ಪತ್ತೆಗೆ ತುರ್ತು ಸೇವಾ ಇಲಾಖೆಯೊಂದಿಗೆ ನಾವೂ ಜೊತೆಗೂಡಿ ಕೆಲಸ ಮಾಡುತ್ತಿದ್ದೇವೆ’ ಎಂದು ಫ್ಲಿಕ್ಸ್‌ಬಸ್‌ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT