ಮೇರಿಲ್ಯಾಂಡ್ (ಅಮೆರಿಕ): ಮನೆಯೊಂದರಲ್ಲಿ ವ್ಯಕ್ತಿಯೊಬ್ಬನ ಮೃತದೇಹದ ಬಳಿ ಬರೋಬ್ಬರಿ 124 ಹಾವುಗಳು ಪತ್ತೆಯಾಗಿ ಅಚ್ಚರಿ ಮೂಡಿಸಿರುವ ಘಟನೆ ಅಮೆರಿಕದ ಮೇರಿಲ್ಯಾಂಡ್‌ನ ಚಾರ್ಲ್ಸ್ ಕಂಟ್ರಿ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.

ಕೈಗಾರಿಕಾ ಪ್ರದೇಶವೊಂದರ ಮನೆಯೊಂದರಲ್ಲಿ ಕೊಳೆತ ವಾಸನೆ ಬಂದಿದ್ದರಿಂದ ಪೊಲೀಸರು ತಪಾಸಣೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಮೇರಿಲ್ಯಾಂಡ್ ಪೊಲೀಸರು ತಿಳಿಸಿರುವುದಾಗಿ ಇಂಡಿಪೆಂಡೆಂಟ್ ಸುದ್ದಿಸಂಸ್ಥೆ ವರದಿ ಮಾಡಿದೆ.

ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಮೃತದೇಹದ ಸುತ್ತಮುತ್ತ ಸುಮಾರು 124 ಹಾವುಗಳು ಇದ್ದವು ಎಂದು ತಿಳಿಸಿದ್ದಾರೆ.

ಈ ಹಾವುಗಳಲ್ಲಿ ಕೆಲವು ವಿಷಕಾರಿ ಹಾಗೂ ಕೆಲವು ವಿಷಕಾರಿ ಅಲ್ಲವಾಗಿದ್ದವು. ಅದರಲ್ಲಿ ನಾಗರಹಾವು, ಹೆಬ್ಬಾವು, ವೈಪರ್ ಸ್ನೇಕ್, ಮಾಂಬಾದಂತಹ ಭಯಾನಕ ವಿಷಸರ್ಪಗಳೂ ಇದ್ದವು. ಇಷ್ಟೊಂದು ಹಾವುಗಳು ಇಲ್ಲಿ ಹೇಗೆ ಇದ್ದವು ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಹಾವುಗಳನ್ನು ಹಿಡಿದಿರುವ ಸ್ಥಳೀಯ ಅರಣ್ಯ ಇಲಾಖೆ, ಅವುಗಳನ್ನು ಕಾಡಿಗೆ ಬಿಡಲು ತಯಾರಿ ಮಾಡಿಕೊಂಡಿದೆ ಎಂದು ವರದಿ ಹೇಳಿದೆ.

ಸಿನಿಮಾ ಚಿತ್ರೀಕರಣದ ಬಿಡುವಿನ ವೇಳೆ ಕ್ರಿಕೆಟ್ ಆಡಿ ಆನಂದಿಸಿದ ನಟ ವಿಕ್ಕಿ ಕೌಶಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.