ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾದಿಂದ ವಿವಾದಿತ ಗಡಿಯಲ್ಲಿ ಶೆಲ್ ದಾಳಿ: ದಕ್ಷಿಣ ಕೊರಿಯಾ

Published 7 ಜನವರಿ 2024, 15:29 IST
Last Updated 7 ಜನವರಿ 2024, 15:29 IST
ಅಕ್ಷರ ಗಾತ್ರ

ಸೋಲ್‌: ಉತ್ತರ ಕೊರಿಯಾವು ಎರಡೂ ದೇಶಗಳ ನಡುವಿನ ಸಮುದ್ರದ ವಿವಾದಿತ ಗಡಿ ಭಾಗದಲ್ಲಿ ಸತತ ಮೂರು ದಿನಗಳಿಂದಲೂ ಶೆಲ್ ದಾಳಿ ನಡೆಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಭಾನುವಾರ ಮಧ್ಯಾಹ್ನ 90ಕ್ಕೂ ಹೆಚ್ಚು ಸುತ್ತು ಶೆಲ್‌ಗಳ ದಾಳಿ ನಡೆದಿದೆ ಎಂದು ದೂರಿರುವ ದಕ್ಷಿಣ ಕೊರಿಯಾದ ಮಿಲಿಟರಿಯು, ಪ್ರಚೋದನಾಕಾರಿ ಕೃತ್ಯಗಳನ್ನು ನಿಲ್ಲಿಸುವಂತೆ ಉತ್ತರ ಕೊರಿಯಾಗೆ ತಾಕೀತು ಮಾಡಿದೆ.

ದಕ್ಷಿಣ ಕೊರಿಯಾದ ಶಸ್ತ್ರಾಸ್ತ್ರ ದಾಳಿ ಪತ್ತೆ ಮಾಡುವ ಸಾಮರ್ಥ್ಯವನ್ನು ಅಣಕಿಸಿರುವ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್‌, ಸೋಲ್‌ನ ಈ ಆರೋಪವನ್ನು ನಿರಾಕರಿಸಿದ್ದಾರೆ.

‘ಶುಕ್ರವಾರ ಶೆಲ್‌ಗಳನ್ನು ಹಾರಿಸಿದ್ದೆವು. ಶನಿವಾರ ಒಂದೇ ಒಂದು ಶೆಲ್ ಹಾರಿಸಿಲ್ಲ’ ಎಂದು ಉತ್ತರ ಕೊರಿಯಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT