ಮ್ಯಾಡ್ರಿಡ್: ಇರಾನ್ ಮೇಲಿನ ಅಮೆರಿಕ ದಾಳಿಗೆ ನಾವು ಸಹಾಯ ಮಾಡುವುದಿಲ್ಲ. ನಮಗೆ ಯುದ್ಧ ಬೇಡ ಎಂದು ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರು ಬುಧವಾರ ಹೇಳಿದ್ದಾರೆ.

ಇರಾನ್ ಮೇಲಿನ ವಾಯುದಾಳಿಗಾಗಿ ಸ್ಪೇನ್ನ ವಾಯುನೆಲೆಗಳನ್ನು ಬಳಸಿಕೊಳ್ಳಲು ಅಮೆರಿಕ ಮುಂದಾಗಿತ್ತು. ಆದರೆ, ಸ್ಪೇನ್ ಇದಕ್ಕೆ ನಿರಾಕರಿಸಿತ್ತು. ಅದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟೀಕಿಸಿದ್ದರು. ಅವರೊಂದಿಗಿನ ಎಲ್ಲಾ ರೀತಿಯ ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು.

ಟ್ರಂಪ್ ಟೀಕೆಗೆ ಉತ್ತರಿಸಿರುವ ಪೆಡ್ರೊ ಸ್ಯಾಂಚೆಜ್, ‘ಯುದ್ಧದ ಕುರಿತು ಸ್ಪೇನ್ ಸರ್ಕಾರದ ನಿರ್ಧಾರವು ಒಂದೇ ಆಗಿದೆ. ನಮಗೆ ಯುದ್ಧ ಬೇಡ ಎನ್ನುವುದೇ ನಮ್ಮ ನಿಲುವುವಾಗಿದೆ’ ಎಂದು ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

‘ಜಗತ್ತಿಗೆ ಹಾನಿಯಾಗುವ ಯಾವುದರಲ್ಲೂ ನಾವು ಕೈಜೋಡಿಸುವುದಿಲ್ಲ. ಪ್ರತೀಕಾರದ ಭಯದಲ್ಲಿ ನಾವು ನಮ್ಮ ನಂಬಿಕೆ ಮತ್ತು ಮೌಲ್ಯಗಳನ್ನು ಬಲಿಕೊಡುವುದಿಲ್ಲ’ ಎಂದು ಹೇಳಿದ್ದಾರೆ.

‘ಅಮೆರಿಕದ ಈ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ. ಇದು ಜಗತ್ತಿಗೆ ವಿಪತ್ತಾಗಿದೆ. ನಾವು ಈ ಕುರಿತು ಹಲವು ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಯುರೋಪ್, ಉತ್ತರ ಅಮೆರಿಕ ಹಾಗು ಪಶ್ಚಿಮ ಏಷ್ಯಾದ ಕೋಟ್ಯಂತರ ನಾಗರಿಕರು ಯುದ್ಧವನ್ನು ವಿರೋಧಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಗಾಜಾ ಮೇಲಿನ ಇಸ್ರೇಲ್ ದಾಳಿ ಸೇರಿದಂತೆ ಹಲವು ಬಾರಿ ಪೆಡ್ರೊ ಸ್ಯಾಂಚೆಜ್ ನೇತೃತ್ವದ ಎಡಪಂಥೀಯ ಸರ್ಕಾರವು ಅಮೆರಿಕದ ನಿಲುವುಗಳನ್ನು ವಿರೋಧಿಸಿದೆ.

2003ರಲ್ಲಿ ಇರಾಕ್ ಮೇಲೆ ದಾಳಿ ನಡೆಸಿದ ವೇಳೆಯಲ್ಲಿ ಸ್ಪೇನ್ನಲ್ಲಿರುವ ರೋಟಾ ನೌಕಾ ನೆಲೆ ಮತ್ತು ಮೊರೊನ್ ವಾಯುನೆಲೆಯನ್ನು ಅಮೆರಿಕ ಸೇನೆಯು ಬಳಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.