ಹಾಂಗ್ಝೌ: ನವದೆಹಲಿಯಲ್ಲಿ 1982ರಲ್ಲಿ ನಡೆದ ಏಷ್ಯನ್ ಕ್ರೀಡೆಯ ನಂತರ ಈಕ್ವೆಸ್ಟ್ರಿಯನ್ ಕ್ರೀಡೆಯಲ್ಲಿ ಭಾರತ ಮೊದಲ ಬಾರಿಗೆ ಚಿನ್ನ ಗೆದ್ದಿದೆ. ಆಮೂಲಕ 41 ವರ್ಷಗಳ ದಾಖಲೆಯನ್ನು ಮುರಿದಿದೆ.

ದಿವ್ಯಕೃತಿ ಸಿಂಗ್, ಹೃದಯ್ ವಿಪುಲ್ ಛಡ್ ಹಾಗೂ ಅನ್ಶು ಅಗರ್ವಾಲ್ ಅವರಿದ್ದ ತಂಡ 209.205 ಶೇಕಡಾವಾರು ಅಂಕಗಳೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿತು.

ಇದೇ ತಂಡದಲ್ಲಿ ಸುದೀಪ್ತಿ ಹಜೆವಾಲಾ ಅವರೂ ಇದ್ದರು. ಆದರೆ ಹೆಚ್ಚಿನ ಅಂಕ ಪಡೆದ ಮೊದಲ ಮೂವರ ಹೆಸರನ್ನು ಪರಿಗಣಿಸಲಾಗಿದೆ. 204.882 ಶೇಖಡಾವಾರು ಅಂಕಗಳೊಂದಿಗೆ ಚೀನಾ ಎರಡನೇ ಸ್ಥಾನ ಪಡೆಯಿತು. ಹಾಂಕಾಂಗ್ 204.852 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

1986ರಲ್ಲಿ ನಡೆದ ಇದೇ ಪಂದ್ಯಾವಳಿಯಲ್ಲಿ ಭಾರತ ಕಂಚಿನ ಪದಕ ಪಡೆದುಕೊಂಡಿತ್ತು.
.Asian Games Hockey: ಸಿಂಗಪುರ ವಿರುದ್ಧ ಭಾರತಕ್ಕೆ 16–1 ಅಂತರದ ಗೆಲುವು .Asian Games: ಸೇಲಿಂಗ್ನಲ್ಲಿ ಭಾರತದ ನೇಹಾ ಠಾಕೂರ್ಗೆ ಬೆಳ್ಳಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.