ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಾಸ್ತ್ರಗಳ ಉತ್ಪಾದನೆ ಘಟಕ ಭಾರತದ ಜತೆ ಚರ್ಚೆ: ಶ್ರೀಲಂಕಾ

Published 15 ಮೇ 2024, 15:55 IST
Last Updated 15 ಮೇ 2024, 15:55 IST
ಅಕ್ಷರ ಗಾತ್ರ

ಕೊಲಂಬೊ: ದೇಶದಲ್ಲಿ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ಘಟಕ ಸ್ಥಾಪನೆ ನಿಟ್ಟಿನಲ್ಲಿ ಭಾರತದ ಜೊತೆಗೆ ಮಾತುಕತೆ ನಡೆಸುತ್ತಿರುವುದಾಗಿ ಶ್ರೀಲಂಕಾದ ರಕ್ಷಣಾ ಸಚಿವ ಪ್ರೇಮಥಾ ಬಂಡಾರ ತೆನ್ನಕೂನ್ ಅವರು ಬುಧವಾರ ತಿಳಿಸಿದ್ದಾರೆ. 

ಈ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಭಾರತದಿಂದ ನಾವು ಕಲಿಯಬೇಕಿರುವ ಮತ್ತು ಅಳವಡಿಸಿಕೊಳ್ಳಬೇಕಿರುವ ಹಲವು ಅಂಶಗಳಿವೆ. ಸೇನಾ ಉದ್ಯಮದಲ್ಲಿ ಇದೊಂದು ಜಂಟಿ ಸಂಸ್ಥೆಯಾಗಲಿದೆ’ ಎಂದು ಹೇಳಿದರು. 

ಕೊಲಂಬೊದಲ್ಲಿರುವ ಭಾರತದ ರಾಯಭಾರಿ ಸಂತೋಷ್ ಝಾ, ‘ಇಂದಿನ ಭಾರತದ ರಕ್ಷಣಾ ಉದ್ಯಮವು ಅತ್ಯುತ್ತಮವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ವಿಶ್ವದರ್ಜೆಯ ಸಾಧನಗಳನ್ನು ಹೊಂದಿದೆ. ಭಾರತವು ತನ್ನ ಸ್ನೇಹಪೂರ್ವ ಪಾಲುದಾರ ಶ್ರೀಲಂಕಾ ರೀತಿಯ ರಾಷ್ಟ್ರಗಳಿಗೆ ತನ್ನ ಸಾಮರ್ಥ್ಯವನ್ನು ವಿಸ್ತರಿಸುವ ಗುರಿ ಹೊಂದಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT