ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್ ದಾಳಿ: ಗಾಜಾದ 39 ಮಂದಿ ಸಾವು

Published 4 ಆಗಸ್ಟ್ 2024, 16:22 IST
Last Updated 4 ಆಗಸ್ಟ್ 2024, 16:22 IST
ಅಕ್ಷರ ಗಾತ್ರ

ಟೆಲ್ ಅವೀವ್: ಇಸ್ರೇಲ್ ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಗಾಜಾದ ಕನಿಷ್ಠ 39 ಜನರು ಮೃತಪಟ್ಟಿದ್ದಾರೆ.

ಗಾಜಾದಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದ್ದ ಎರಡು ಶಾಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ದಾಳಿ ನಡೆಸಿದ್ದು, ಭಾನುವಾರ ಕನಿಷ್ಠ 25 ಜನರ ಹತರಾಗಿದ್ದಾರೆ ಎಂದು ಅಧಿಕೃತ ಸುದ್ದಿ ಸಂಸ್ಥೆ ತಿಳಿಸಿದೆ.

ಗಾಜಾದ ಅಲ್-ಅಕ್ಸಾ ಹುತಾತ್ಮರ ಆಸ್ಪತ್ರೆಯ ಪರಿಹಾರ ಶಿಬಿರದ ಮೇಲೆ ಇಸ್ರೇಲ್ ದಾಳಿ ಮಾಡಿದ್ದು, ಒಬ್ಬ ಮಹಿಳೆ ಸೇರಿದಂತೆ ನಾಲ್ಕು ಜನರು ಮೃತಪಟ್ಟಿದ್ದು, ಇತರರು ಗಾಯಗೊಂಡರು ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರತ್ಯೇಕ ದಾಳಿಯಲ್ಲಿ ಉತ್ತರ ಗಾಜಾದ ಮನೆಯೊಂದು ನೆಲಸಮಗೊಂಡಿದ್ದು, ಮೂರು ಮಕ್ಕಳು ಸೇರಿದಂತೆ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಅಲ್ಲದೇ, ಟೆಲ್ ಅವೀವ್‌ ಉಪನಗರದಲ್ಲಿ ಪ್ಯಾಲೆಸ್ಟೀನಿಯನ್ನ ಉಗ್ರಗಾಮಿಗಳು ಚಾಕು ಇರಿದು 70 ವರ್ಷದ ವೃದ್ಧೆ ಮತ್ತು 80 ವರ್ಷದ ವೃದ್ಧನನ್ನು ಹತ್ಯೆ ಮಾಡಿದ್ದು, ಇಬ್ಬರು ಪುರುಷರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ಮ್ಯಾಗೆನ್ ಡೇವಿಡ್ ಆಡಮ್ ಪಾರುಗಾಣಿಕಾ ಸಂಸ್ಥೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT