ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಸ್‌ಮಸ್‌ ಸಂಭ್ರಮದಲ್ಲಿದವರ ಮೇಲೆ ಆತ್ಮಾಹುತಿ ದಾಳಿ: 6 ಸಾವು

Last Updated 26 ಡಿಸೆಂಬರ್ 2021, 10:41 IST
ಅಕ್ಷರ ಗಾತ್ರ

ಬೆನಿ, ಕಾಂಗೊ: ಕಾಂಗೋದ ಪೂರ್ವಭಾಗದ ಬೆನಿ ಎಂಬ ಪಟ್ಟಣದಲ್ಲಿಕ್ರಿಸ್‌ಮಸ್‌ ದಿನದ ಆಚರಣೆಗೆ ಶನಿವಾರ ಬಾರ್‌ ಮತ್ತು ರೆಸ್ಟೋರೆಂಟ್‌ವೊಂದರಲ್ಲಿ ಸೇರಿದ್ದ ಜನರ ಗುಂಪಿನ ಮೇಲೆ ಆತ್ಮಾಹುತಿ ಬಾಂಬ್‌ ದಾಳಿಯೊಂದು ನಡೆದಿದ್ದು, ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ.

ಪಟ್ಟಣದಲ್ಲಿ ಇಸ್ಲಾಮಿಕ್‌ ಉಗ್ರ ಸಂಘಟನೆಗಳು ಸಕ್ರಿಯವಾಗಿದ್ದು, ಇದು ಅವರದೇ ಕೃತ್ಯ ಇರಬೇಕು ಎಂದು ಶಂಕಿಸಲಾಗಿದೆ.

‘ಬಾರ್‌ನೊಳಗೆ ನುಗ್ಗಲು ಯತ್ನಿಸಿದ ಆತ್ಮಾಹುತಿ ಬಾಂಬ್‌ ದಾಳಿಕೋರನನ್ನು ಅಲ್ಲಿಯ ಭದ್ರತಾ ಸಿಬ್ಬಂದಿ ತಡೆದರು. ನಂತರ ಆ ದಾಳಿಕೋರ ಬಾರ್‌ನ ಪ್ರವೇಶ ದ್ವಾರದಲ್ಲೇ ಸ್ಫೋಟಿಸಿಕೊಂಡಿದ್ದಾನೆ’ ಎಂದು ಉತ್ತರ ಕಿವು ರಾಜ್ಯದ ಗವರ್ನರ್‌ ಅವರ ವಕ್ತಾರಜನರಲ್ ಸಿಲ್ವೈನ್ ಎಕೆಂಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT