ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರ್ವೆ: ತೃತೀಯ ಲಿಂಗಿಗಳ ‘ಪ್ರೈಡ್‌ ಫೆಸ್ಟಿವಲ್‌’ ವೇಳೆ ಶೂಟೌಟ್, ಇಬ್ಬರ ಸಾವು

Last Updated 25 ಜೂನ್ 2022, 11:51 IST
ಅಕ್ಷರ ಗಾತ್ರ

ಓಸ್ಲೊ: ನಾರ್ವೆ ರಾಜಧಾನಿ ಓಸ್ಲೊ ನಗರದಲ್ಲಿ ರಾತ್ರಿ ಪಾರ್ಟಿ ವೇಳೆ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೃತೀಯ ಲಿಂಗಿಗಳು ಹಮ್ಮಿಕೊಂಡಿದ್ದ ವಾರ್ಷಿಕ ಕಾರ್ಯಕ್ರಮ ‘ಪ್ರೈಡ್‌ ಫೆಸ್ಟಿವಲ್‌’ ನಡೆಯುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಈ ಭಯೋತ್ಪಾದಕರ ಕೃತ್ಯ ಇರಬಹುದು ಎಂದು ‍ಪೊಲೀಸರು ಶಂಕಿಸಿದ್ದಾರೆ. ಈ ಘಟನೆಯಿಂದಾಗಿ ಕಾರ್ಯಕ್ರಮವನ್ನೇ ರದ್ದುಪಡಿಸಲಾಗಿದೆ.

‘ಪ್ರಕರಣಕ್ಕೆ ಸಂಬಂಧಿಸಿ 42 ವರ್ಷದ ಶಂಕಿತನನ್ನು ಬಂಧಿಸಲಾಗಿದೆ. ಈತ ಇರಾನ್‌ ಮೂಲದ ನಾರ್ವೆ ಪ್ರಜೆ ಎಂದು ಗುರುತಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

‘ಜನರಲ್ಲಿ ಭೀತಿ ಉಂಟು ಮಾಡುವುದೇ ದಾಳಿಕೋರನ ಉದ್ದೇಶವಾಗಿತ್ತು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ದಾಳಿಕೋರನ ಮಾನಸಿಕ ಆರೋಗ್ಯದ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT