ಕಾಬೂಲ್: ಪಂಜ್‌ಶಿರ್ ಪ್ರಾಂತ್ಯವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.

ಇದುವರೆಗೆ ಈ ಪ್ರಾಂತ್ಯವು ಅಫ್ಗಾನಿಸ್ತಾನದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಪಡೆಯ(ಎನ್‌ಆರ್‌ಎಫ್‌ಎ) ನಿಯಂತ್ರಣದಲ್ಲಿತ್ತು. ತಾಲಿಬಾನ್ ಮತ್ತು ಎನ್‌ಆರ್‌ಎಫ್‌ಎ ನಡುವೆ ಹಲವು ದಿನಗಳಿಂದ ಕದನ ನಡೆದಿತ್ತು.

ಪಂಜ್‌ಶಿರ್ ವಶಪಡಿಸಿಕೊಳ್ಳುವ ಮೂಲಕ ತಾಲಿಬಾನ್, ಅಫ್ಗಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿಂದೆ.

ಇದನ್ನೂ ಓದಿ– ತಾಲಿಬಾನ್ ಒಳಜಗಳ: ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್–ಹಖ್ಖಾನಿ ಗುಂಪಿನ ಸಂಘರ್ಷ

ಪಂಜ್‌ಶಿರ್ ಪ್ರಾಂತ್ಯದ ಗವರ್ನರ್ ಕಟ್ಟಡದ ಆವರಣದಲ್ಲಿ ತಾಲಿಬಾನಿಗಳು ನಿಂತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಕಾಲೇಜು ಯುವತಿಯರಿಗೆ ನಿಖಾಬ್ ಕಡ್ಡಾಯ: ತಾಲಿಬಾನ್ ಆದೇಶ

ಕಾಬೂಲ್ (ಎಎಫ್‌ಪಿ): ಅಫ್ಗಾನಿಸ್ತಾನದ ಖಾಸಗಿ ವಿಶ್ವವಿದ್ಯಾಲಯಗಳ ತರಗತಿಗಳಿಗೆ ಹಾಜರಾಗುವ ಯುವತಿಯರು/ಮಹಿಳೆಯರು, ಮುಖವನ್ನು ಮುಚ್ಚುವಂಥ ವಸ್ತ್ರವನ್ನು (ನಿಖಾಬ್) ಕಡ್ಡಾಯವಾಗಿ ಧರಿಸಬೇಕು ಎಂದು ತಾಲಿಬಾನ್ ಆದೇಶಿಸಿದೆ.

ಇದರೊಂದಿಗೆ, ಯುವಕ–ಯುವತಿಯರಿಗೆ ಪ್ರತ್ಯೇಕವಾಗಿ ಅಥವಾ ಅವರಿಬ್ಬರ ಮಧ್ಯದಲ್ಲಿ ಪರದೆಯನ್ನು ಅಳವಡಿಸಿ ತರಗತಿಗಳನ್ನು ನಡೆಸುವಂತೆ ಸೂಚಿಸಿದೆ.

ತಾಲಿಬಾನ್‌ನ ಶಿಕ್ಷಣ ವಿಭಾಗದ ಅಧಿಕಾರಿಗಳು ಈ ಬಗ್ಗೆ ಸುದೀರ್ಘವಾದ ಮಾರ್ಗಸೂಚಿಯನ್ನು ಪ್ರಕಟಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಮಹಿಳೆಯರೇ ಪಾಠ ಮಾಡಬೇಕು. ಅದು ಸಾಧ್ಯವಾಗದೇ ಹೋದಲ್ಲಿ ಉತ್ತಮ ಚಾರಿತ್ರ್ಯದ ‘ವಯಸ್ಸಾದ ಪುರುಷರು’ ಪಾಠ ಮಾಡಬಹುದು ಎಂದು ಹೇಳಿದೆ. 2001ರಲ್ಲಿ ತಾಲಿಬಾನ್ ಆಡಳಿತ ಕೊನೆಗೊಳ್ಳುತ್ತಲೇ ದೇಶದಲ್ಲಿ ಸ್ಥಾಪನೆಯಾಗಿರುವ ಎಲ್ಲ ಖಾಸಗಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಈ ಆದೇಶ ಅನ್ವಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.