ಕಾಬುಲ್: ಕೈವಶ ಮಾಡಿಕೊಂಡಿರುವ ಅಪ್ಗಾನಿಸ್ತಾನದಲ್ಲಿ ಸರ್ಕಾರ ರಚಿಸಲು ಹೆಣಗುತ್ತಿರುವ ತಾಲಿಬಾನ್ ಅಲ್ಲಿನ ರಾಜಕಾರಣಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದೆ.

ತಾಲಿಬಾನ್ ಕಮಾಂಡರ್ ಮತ್ತು ಉಗ್ರ ಸಂಘಟನೆಗಳ ಹಕ್ಕಾನಿ ಉಗ್ರಜಾಲದ ಹಿರಿಯ ಮುಖಂಡ ಅನಸ್ ಹಕ್ಕಾನಿ ಬುಧವಾರ ಆಫ್ಗನ್‌ನ ಮಾಜಿ ಅಧ್ಯಕ್ಷ ಹಮಿದ್ ಕರ್ಜಾಯ್ ಅವರನ್ನು ಭೇಟಿ ಮಾಡಿದ್ದಾನೆ.

ಭೇಟಿ ವೇಳೆ ಕರ್ಜಾಯ್ ಜೊತೆ ಹಳೆಯ ಸರ್ಕಾರದ ಪ್ರಮುಖ ಶಾಂತಿದೂತ ಎಂದು ಕರೆಯಿಸಿಕೊಂಡಿರುವ ಅಬ್ದುಲ್ಲಾ ಅಬ್ದುಲ್ಲಾ ಇದ್ದರು ಎಂದು ತಾಲಿಬಾನ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಭೇಟಿ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದೆ ಎಂದು ಅಫ್ಗಾನಿಸ್ತಾನದ ಮಾಧ್ಯಮ 'ಟೊಲೊನ್ಯೂಸ್' ವರದಿ ಮಾಡಿದೆ.

ಭಾನುವಾರ ಅಫ್ಗಾನಿಸ್ತಾನದ ರಾಜಧಾನಿ ಕಾಬುಲ್‌ಅನ್ನು ವಶಪಡಿಸಿಕೊಂಡ ತಾಲಿಬಾನ್ ಕಾರ್ಯಾಚರಣೆಯಲ್ಲಿ ಹಕ್ಕಾನಿ ನೆಟ್‌ವರ್ಕ್ ಪ್ರಮುಖ ಪಾತ್ರ ವಹಿಸಿದೆ. ಪಾಕಿಸ್ತಾನದ ಗಡಿಯಲ್ಲಿ ನೆಲೆಸಿರುವ ಈ ಉಗ್ರಜಾಲವು ಕಳೆದ ಕೆಲವು ವರ್ಷಗಳಲ್ಲಿ ಅಫ್ಗಾನಿಸ್ತಾನದ ಮೇಲೆ ಹಲವು ಮಾರಣಾಂತಿಕ ದಾಳಿ ನಡೆಸಿದೆ.

ಸ್ವದೇಶಕ್ಕೆ ತೆರಳಲು ಭಾರತೀಯರಿಗೆ ತಾಲಿಬಾನ್ ಬೆಂಗಾವಲು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.