ಜಲಾಲಾಬಾದ್/ಅಘ್ಘಾನಿಸ್ತಾನ: ಅಫ್ಘಾನಿಸ್ತಾನದಲ್ಲಿನ ‘ಬಾಗ್ರಾಮ್ ವಾಯುನೆಲೆ’ಯನ್ನು ಮರಳಿ ಪಡೆಯುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾವವನ್ನು ತಾಲಿಬಾನ್ ಆಡಳಿತ ಭಾನುವಾರ ತಿರಸ್ಕರಿಸಿದೆ.

ವಿಸ್ತಾರವಾದ ಮಿಲಿಟರಿ ಸೌಲಭ್ಯವನ್ನು ತಾಲಿಬಾನ್ಗೆ ಒಪ್ಪಿಸಿ, ಅಮೆರಿಕ ಪಡೆಗಳು ವಾಪಾಸಾದ ನಾಲ್ಕು ವರ್ಷಗಳ ಬಳಿಕ ಟ್ರಂಪ್ ಅವರು ಈ ವಾಯುನೆಲೆಯನ್ನು ಮರಳಿ ಪಡೆಯುವ ಪ್ರಯತ್ನ ನಡೆಸಿದ್ದಾರೆ.

ಅಘ್ಘಾನಿಸ್ತಾನದಲ್ಲಿ 2021ರಲ್ಲಿ ತಾಲಿಬಾನ್ ಆಡಳಿತ ಅಧಿಕಾರಕ್ಕೆ ಬಂದ ಬಳಿಕ ಭಯೋತ್ಪಾದನೆ, ಆರ್ಥಿಕ ಅಸ್ಥಿರತೆ, ಅಂತರರಾಷ್ಟ್ರೀಯ ಮತ್ತು ಆಂತರಿಕ ಬಿಕ್ಕಟ್ಟು ಹೆಚ್ಚಿದೆ. ಹೀಗಾಗಿ ಅಮೆರಿಕದ ಮಿಲಿಟರಿಯು ಹಿಂತಿರುಗಲು ಬಾಗ್ರಾಮ್ ವಾಯುನೆಲೆಯು ಮುಕ್ತವಾಗಿರಬೇಕು ಎಂದು ಟ್ರಂಪ್ ಬಯಸುತ್ತಿದ್ದು, ಈ ಬಗ್ಗೆ ಸುಳಿವು ನೀಡಿದ್ದಾರೆ.

ತಾಲಿಬಾನ್ ವಕ್ತಾರ ಜುಬೈದುಲ್ಲಾ ಮುಜಾಹಿದ್, ‘ಟ್ರಂಪ್ ಪ್ರಸ್ತಾವವನ್ನು ತಿರಸ್ಕರಿಸಿದ್ದು, ಅಮೆರಿಕವು ಈ ವಿಚಾರದಲ್ಲಿ ವಾಸ್ತವಿಕತೆ ಮತ್ತು ವೈಚಾರಿಕತೆ ಅಳವಡಿಸಿಕೊಳ್ಳಬೇಕು’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಾಲಿಬಾನ್ ಸರ್ಕಾರ ಕಳೆದ ವರ್ಷ ಬಾಗ್ರಾಮ್ ವಾಯುನೆಲೆಯನ್ನು ವಾಪಸ್ ಪಡೆದ 3ನೇ ವಾರ್ಷಿಕೋತ್ಸವ ಆಚರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.